ADVERTISEMENT

ಪ್ರಭಾಸ್‌ ಅಭಿನಯದ ಸಲಾರ್‌ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2023, 7:27 IST
Last Updated 24 ಅಕ್ಟೋಬರ್ 2023, 7:27 IST
<div class="paragraphs"><p>ಸಲಾರ್‌ ಚಿತ್ರದ ಹೊಸ ಪೋಸ್ಟರ್‌ </p></div>

ಸಲಾರ್‌ ಚಿತ್ರದ ಹೊಸ ಪೋಸ್ಟರ್‌

   

ಚಿತ್ರ ಕೃಪೆ: ಎಕ್ಸ್‌ @hombalefilms

ಪ್ರಭಾಸ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸಲಾರ್‌’ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದು, ಅನೌನ್ಸ್‌ಮೆಂಟ್‌ ಪೋಸ್ಟರ್‌ಗಳಿಂದ ಹಿಡಿದು ಟೀಸರ್‌ವರೆಗಿನ ಈ ಸಾಹಸಮಯ ಚಿತ್ರಕ್ಕಾಗಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ.

ADVERTISEMENT

‌ಚಿತ್ರದ ಬಿಡುಗಡೆಗೆ ಇನ್ನೂ ಎರಡು ತಿಂಗಳಿರುವಾಗಲೇ, ನಿರ್ಮಾಪಕರು ಪ್ರಭಾಸ್‌ ಅವರ ಪವರ್‌ ಪ್ಯಾಕ್ಡ್‌ ಹೊಸ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿದ್ದಾರೆ. ಪ್ರಭಾಸ್‌ ಅವರ ಹುಟ್ಟುಹಬ್ಬದ ಆಚರಣೆಯ ನೆನಪಿಗಾಗಿ ಚಿತ್ರದ ಹೊಸ ಪೋಸ್ಟರ್‌ ಅನ್ನು ಅನಾವರಣಗೊಳಿಸಲಾಗಿದೆ.

ನಟ ಪ್ರಭಾಸ್‌ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರತಿ ವರ್ಷ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದು, ಈ ವರ್ಷ ಸಲಾರ್‌ ತೆರೆಗೆ ಬರುತ್ತಿರುವುದು ನಿರೀಕ್ಷೆಗೂ ಮೀರಿ ಜನರಲ್ಲಿ ಉತ್ಸಾಹ ಮೂಡಿಸಿದೆ.

ಪ್ರಭಾಸ್‌ ಹುಟ್ಟುಹಬ್ಬದಂದು ಹೈದರಾಬಾದ್‌ನ ಕುಕಟ್‌ಪಲ್ಲಿಯಲ್ಲಿ ಸಲಾರ್‌ ಚಿತ್ರದ ಬೃಹತ್‌ ಕಟೌಟ್‌ ಹಾಕುವ ಮೂಲಕ ಅಭಿಮಾನಿಗಳು ದಾಖಲೆಯನ್ನು ನಿರ್ಮಿಸಿದ್ದಾರೆ.

ಪ್ರಶಾಂತ್‌ ನೀಲ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಸಲಾರ್‌’, ‘ಕೆ.ಜಿ.ಎಫ್‌.’ನಂತೆ ಎರಡು ಭಾಗಗಳಲ್ಲಿ ತೆರೆಕಾಣುತ್ತಿದೆ. ಸಿನಿಮಾದ ಮೊದಲ ಭಾಗಕ್ಕೆ ‘ಸೀಸ್‌ ಫೈರ್‌’ ಎಂಬ ಅಡಿಬರಹವಿದೆ. ಹೊಂಬಾಳೆ ಫಿಲ್ಮ್ಸ್‌ನಡಿ ನಿರ್ಮಾಪಕ ವಿಜಯ್ ಕಿರಗಂದೂರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸುಮಾರು ₹400 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ.

ಸಲಾರ್‌ ಚಿತ್ರವು ವರ್ಷಾಂತ್ಯದ ಡಿಸೆಂಬರ್‌ 22ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

ಈ ಚಿತ್ರವು ಐದು ಭಾಷೆಗಳಲ್ಲಿ ಮೂಡಿ ಬರಲಿದ್ದು, ನಾಯಕಿಯಾಗಿ ಶ್ರುತಿ ಹಾಸನ್ ಅಭಿನಯಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದ ಖ್ಯಾತ ಕಲಾವಿದರ ನಟಿಸಿದ್ದು, ರವಿ ಬಸ್ರೂರು ಸಂಗೀತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.