ADVERTISEMENT

ಸಲ್ಮಾನ್ ಖಾನ್ ಐಷಾರಾಮಿ ಫಾರ್ಮ್‌ಹೌಸ್: ಕೃಷಿ, ಜಿಮ್, ಈಜುಕೊಳ ಸೇರಿ ಏನೇನಿವೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2025, 11:38 IST
Last Updated 27 ಡಿಸೆಂಬರ್ 2025, 11:38 IST
   

ಬಾಲಿವುಡ್ ನಟ, ನಟಿಯರು ಸಾಮಾನ್ಯವಾಗಿ ತಮ್ಮ ಹುಟ್ಟುಹಬ್ಬವನ್ನು ಐಷಾರಾಮಿ ಹೋಟೆಲ್‌ಗಳಲ್ಲಿ ಆಚರಿಸಿಕೊಳ್ಳುತ್ತಾರೆ. ಆದರೆ, ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ 60ನೇ ವರ್ಷದ ಜನ್ಮ ದಿನಾಚರಣೆಯನ್ನು ‘ಪನ್ವೆಲ್’ ತೋಟದ ಮನೆಯಲ್ಲಿ ಆಚರಿಸಿಕೊಂಡಿದ್ದಾರೆ. ಈ ಐಷಾರಾಮಿ ತೋಟದ ಮನೆಯ ವಿಶೇಷತೆಗಳನ್ನು ನೋಡೋಣ.

ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಅವರ ತೋಟದ ಮನೆ ₹80 ಕೋಟಿ ಮೌಲ್ಯದ್ದಾಗಿದೆ. ಸಲ್ಮಾನ್ ಖಾನ್ ಅವರು ಈ ತೋಟದ ಮನೆಯಲ್ಲಿ ಜಿಮ್, ಈಜುಕೊಳ ಸೇರಿದಂತೆ ಇನ್ನೂ ಅನೇಕ ಸೌಲಭ್ಯಗಳನ್ನು ಮಾಡಿಸಿಕೊಂಡಿದ್ದಾರೆ.

ಖಾಸಗಿ ಜಿಮ್: 

ADVERTISEMENT

ಸಲ್ಮಾನ್ ಖಾನ್ ಅವರು ತಮ್ಮ 60ನೇ ವಯಸ್ಸಿನಲ್ಲೂ ಸಿಕ್ಕಾಪಟ್ಟೆ ಫಿಟ್ ಆಗಿದ್ದಾರೆ. ಅವರ ಫಿಟ್‌ನೆಸ್‌ ಗುಟ್ಟು ಅಡಗಿರುವುದೇ ವ್ಯಾಯಾಮದಲ್ಲಿ. 150 ಎಕರೆ ಇರುವ ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿ ವ್ಯಾಯಾಮಕ್ಕೆ ಅಗತ್ಯವಾಗಿ ಬೇಕಾಗಿರುವ ಆಧುನಿಕ ಉಪಕರಣಗಳುಳ್ಳ ಸುಸಜ್ಜಿತ ಜಿಮ್ ನಿರ್ಮಿಸಿಕೊಂಡಿದ್ದಾರೆ.  

ಈಜುಕೊಳ: 

ಪನ್ವೆಲ್‌ನಲ್ಲಿರುವ ಈಜುಕೊಳ ಯಾವುದೇ ರೆಸಾರ್ಟ್‌ಗಳ ಈಜುಕೊಳಕ್ಕಿಂತ ಕಡಿಮೆ ಇಲ್ಲ. ಇದು ಸುಂದರ ಹಾಗೂ ನವೀನ ಮಾದರಿಯಲ್ಲಿದೆ. ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈಜುಕೊಳದ ಚಿತ್ರಗಳನ್ನು ಹಂಚಿಕೊಂಡಿದ್ದರು. 

ಲಷ್ ಗ್ರೀನ್ ಫಾರ್ಮ್: 

ಸಲ್ಮಾನ್ ಖಾನ್ ಒಬ್ಬ ನಟ, ಕಲಾವಿದ, ಬೈಕರ್, ನಿರೂಪಕ ಮತ್ತು ನಿರ್ಮಾಪಕ. ಮಾತ್ರವಲ್ಲ, ಅವರೊಬ್ಬ ರೈತ ಕೂಡಾ ಎಂಬುದನ್ನು ಸಾಬೀತು ಮಾಡಿದ್ದಾರೆ. ಅವರು ತಮ್ಮ ಕೃಷಿ ಜೀವನದ ಕೆಲವು ಪೊಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರೆ. ಆಗ್ಗಾಗ್ಗೆ ತಮ್ಮ ಜಮೀನಿನಲ್ಲಿ ಬೀಜ ಬಿತ್ತುವುದು, ಪೈರು ನಾಟಿ ಮಾಡುವುದು ‌ಹಾಗೂ ಬೆಳೆ ಕಟಾವು ಮಾಡುವುದನ್ನು ಕೂಡ ಮಾಡುತ್ತಾರೆ. 

ಸಾಕು ಪ್ರಾಣಿಗಳು:

ಪನ್ವೆಲ್ ಫಾರ್ಮ್‌ಹೌಸ್ ಗ್ರಾಮೀಣ ಜೀವನಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಪ್ರಾಣಿ ಪ್ರಿಯರಾದ ಸಲ್ಮಾನ್ ಖಾನ್ ಅವರ ಅರ್ಪಿತಾ ಫಾರ್ಮ್ಸ್‌ನಲ್ಲಿ ಕುದುರೆ, ನಾಯಿ ಸೇರಿದಂತೆ ಇತರೆ ಸಾಕು ಪ್ರಾಣಿಗಳಿವೆ. ಅವರು ತಮ್ಮ ಕುದುರೆಯೊಂದಿಗಿರುವ ಪೊಟೋವನ್ನು ಒಂದೆರೆಡು ಬಾರಿ ಹಂಚಿಕೊಂಡಿದ್ದಾರೆ. 

ಐಷಾರಾಮಿ ಬಂಗಲೆ: 

ಪನ್ವೆಲ್ ಫಾರ್ಮ್‌ಹೌಸ್‌ ಜಿಮ್, ಈಜುಕೊಳ ಮಾತ್ರವಲ್ಲ, ಐಷಾರಾಮಿ ಬಂಗಲೆಯನ್ನೂ ಒಳಗೊಂಡಿದೆ. ಇದರಲ್ಲಿ ತಮಗೆ ಬೇಕಾದ ಆಧುನಿಕ ಪಿಠೋಪಕರಣಗಳು ಸೇರಿದ್ದು, ಅವರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳು ಬಂಗಲೆಯಲ್ಲಿವೆ. ಸಲ್ಮಾನ್ ಖಾನ್ ಅವರು ಇಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.