ADVERTISEMENT

‘ಸಿಕಂದರ್’ ಚಿತ್ರದ ಟೀಸರ್‌ ಬಿಡುಗಡೆ: ಖಡಕ್‌ ಲುಕ್‌ನಲ್ಲಿ ನಟ ಸಲ್ಮಾನ್‌ ಖಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2024, 12:56 IST
Last Updated 28 ಡಿಸೆಂಬರ್ 2024, 12:56 IST
<div class="paragraphs"><p>‘ಸಿಕಂದರ್’ ಚಿತ್ರದ ಪೋಸ್ಟರ್</p></div>

‘ಸಿಕಂದರ್’ ಚಿತ್ರದ ಪೋಸ್ಟರ್

   

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅಭಿನಯದ ಬಹು ನಿರೀಕ್ಷಿತ ‘ಸಿಕಂದರ್’ ಸಿನಿಮಾದ ಟೀಸರ್‌ ಇಂದು(ಶನಿವಾರ) ಬಿಡುಗಡೆಯಾಗಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ನಟ ಸಲ್ಮಾನ್‌ ಖಾನ್‌, ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು. ಸಿಕಂದರ್‌ ಟೀಸರ್‌ ಅನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ADVERTISEMENT

‘ಗಜಿನಿ‘, ‘ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ‘ ಖ್ಯಾತಿಯ ನಿರ್ದೇಶಕ ಎ.ಆರ್ ಮುರುಗದಾಸ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

‘ಕತ್ತಲ ಜಗತ್ತಿನೊಂದಿಗೆ ಆರಂಭವಾಗುವ ಟೀಸರ್‌ ವಿಡಿಯೊ ಆ್ಯಕ್ಷನ್‌ ಥ್ರಿಲ್ಲರ್‌ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಫೈಟಿಂಗ್‌ ದೃಶ್ಯದೊಂದಿಗೆ ಸಲ್ಲು ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

‘ಸಿಂಗಮ್ 3‘ ಮತ್ತು ‘ಬೇಬಿ ಜಾನ್‘ ಚಲನಚಿತ್ರಗಳಲ್ಲಿ ಸಲ್ಮಾನ್‌ ಖಾನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸಲ್ಮಾನ್‌ ಖಾನ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರು ನಟಿಸಿರುವ ಬಹು ನಿರೀಕ್ಷಿತ ಸಿಕಂದರ್‌ ಸಿನಿಮಾದ ಟೀಸರ್‌ ಗುರುವಾರ ಬಿಡುಗಡೆಯಾಗಬೇಕಿತ್ತು. ಆದರೆ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ನಿಧನರಾದ ಹಿನ್ನೆಲೆಯಲ್ಲಿ ಸಿನಿಮಾದ ಟೀಸರ್‌ ಬಿಡುಗಡೆಯನ್ನು ಚಿತ್ರ ನಿರ್ಮಾಪಕರು ಮುಂದೂಡಿದ್ದರು. ಸಿಕಂದರ್ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ.

ಈ ಚಿತ್ರ 2025ರ ಈದ್‌ ಹಬ್ಬಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.