
ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಅವರ ವಿವಾಹ, ‘ಫ್ಯಾಮಿಲಿ ಮ್ಯಾನ್’ ವೆಬ್ ಸರಣಿಯ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ನೆರವೇರಿದ್ದು, ಇಬ್ಬರಿಗೂ ಇದು ಎರಡನೇ ವಿವಾಹವಾಗಿದೆ.
ಈ ನಡುವೆ, ನಿಡಿಮೋರು ಮಾಜಿ ಪತ್ನಿ ಶ್ಯಾಮಲಿ ದೇ ಅವರ ಇನ್‌ಸ್ಟಾಗ್ರಾಂ ಸ್ಟೋರಿ ಗಮನ ಸೆಳೆದಿದೆ. 'ಹತಾಶ ಜನರು ಹತಾಶೆಯ ಕೆಲಸ ಮಾಡುತ್ತಾರೆ' ಎಂಬ ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿದೆ.
ಪೋಸ್ಟ್‌ನಲ್ಲಿ ಯಾರ ಹೆಸರನ್ನು ಉಲ್ಲೇಖಿಸದಿದ್ದರೂ, ವಿವಾಹದ ಸಂದರ್ಭದಲ್ಲಿಯೇ ಪೋಸ್ಟ್ ಹಂಚಿಕೊಂಡಿರುವುದು ಮಾಜಿ ಪತಿಯನ್ನು ಗುರಿಯಾಗಿಸಿ ಹೇಳಿದ್ದಾರಾ? ಎಂಬ ಅನುಮಾನಕ್ಕೆ ಕಾರಣವಾಗಿದೆ.
2012ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ನಿಡಿಮೋರು ಹಾಗೂ ಶ್ಯಾಮಲಿ, 2022ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.
2017ರಲ್ಲಿ ಟಾಲಿವುಡ್ ನಟ ನಾಗಚೈತನ್ಯ ಅವರನ್ನು ವಿವಾಹವಾಗಿದ್ದ ಸಮಂತಾ ಅವರು 2021ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಕಳೆದ ವರ್ಷ ನಟಿ ಶೋಭಿತಾ ಅವರನ್ನು ನಾಗಚೈತನ್ಯ ಎರಡನೇ ವಿವಾಹವಾಗಿದ್ದಾರೆ.
ಫ್ಯಾಮಿಲಿ ಮ್ಯಾನ್ –2 ವೆಬ್ ಸರಣಿಯಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಸಮಂತಾ– ನಿಡಿಮೋರು ಅಲ್ಲಿಂದ ಹೆಚ್ಚು ಆತ್ಮೀಯರಾಗಿದ್ದರು. ನಿಡಿಮೋರು ಅವರೊಂದಿಗಿನ ಫೋಟೊಗಳನ್ನು ಸಮಂತಾ ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು. ಇದು ಹಲವು ದಿನಗಳಿಂದ ವದಂತಿಗೆ ಕಾರಣವಾಗಿತ್ತು. ಇದೀಗ ವಿವಾಹವಾಗುವ ಮೂಲಕ ಎಲ್ಲ ಅನುಮಾಗಳಿಗೆ ಈ ಜೋಡಿ ತೆರೆ ಎಳೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.