ADVERTISEMENT

ಸುಧಾ ಮೂರ್ತಿ ಅವರನ್ನು ಭೇಟಿಯಾದ ರಾಬರ್ಟ್ ಬೆಡಗಿ ‘ಆಶಾ ಭಟ್’; ಫೋಟೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2022, 8:42 IST
Last Updated 13 ಮೇ 2022, 8:42 IST
ಸುಧಾ ಮೂರ್ತಿ ಅವರೊಂದಿಗೆ ನಟಿ ಆಶಾ ಭಟ್ (ಇನ್‌ಸ್ಟಾಗ್ರಾಮ್‌ ಚಿತ್ರ)
ಸುಧಾ ಮೂರ್ತಿ ಅವರೊಂದಿಗೆ ನಟಿ ಆಶಾ ಭಟ್ (ಇನ್‌ಸ್ಟಾಗ್ರಾಮ್‌ ಚಿತ್ರ)   

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ‘ರಾಬರ್ಟ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು ನಟಿ ಆಶಾ ಭಟ್.

ಭರವಸೆಯ ನಟಿ ಎನಿಸಿಕೊಂಡಿರುವ ಅವರು ನಟಿಯಾಗಿ ಮತ್ತು ಗಾಯಕಿಯಾಗಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಆಶಾ ಭಟ್‌ ಅವರು ಇತ್ತೀಚೆಗೆ ದೆಹಲಿಯಲ್ಲಿ ಇನ್ಫೊಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರನ್ನು ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಸುಧಾ ಮೂರ್ತಿ ಅವರು ಒಬ್ಬರು ಶ್ರೇಷ್ಠ ಮಹಿಳೆ, ಅವರಿಂದ ಸದಾ ನಾನು ಸ್ಫೂರ್ತಿ ಪಡೆದಿದ್ದೇನೆ. ಅವರ ಗುಣ ಮತ್ತು ನಮ್ರತೆ ನನಗೆ ಬೆರಗುಗೊಳಿಸುತ್ತದೆ ಎಂದು ಪೋಸ್ಟ್‌ ಮಾಡಿದ್ದಾರೆ. ಇದೀಗ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಶಾ, 2019ರಲ್ಲಿ ತೆರೆ ಕಂಡಿದ್ದ ‘ಜಂಗ್ಲಿ’ ಸಿನಿಮಾದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಸದ್ಯ ಅವರು ‘ಓರಿ ದೇವುಡ’ ತೆಲುಗು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.