ಬೆಂಗಳೂರು: ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬಂಧಿಸಿರುವ ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಅವರು ತಲೆಗೂದಲು ಪರೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಡಿಯೊ ವೈರಲ್ ಆಗಿದೆ.
ವಿಡಿಯೊದಲ್ಲಿ, ನಮ್ಮ ಲೈಫ್ ಈಗಾಗಲೇ ಹಾಳಾಗಿದೆ. ಇದರಲ್ಲಿ ಸಿಕ್ಕಿಹಾಕಿಕೊಂಡರೆ ಜೈಲಿಗೆ ಹೋಗಬೇಕಾಗುತ್ತದೆ. ಮೊದಲೇ ನಮ್ಮ ಲೈಪ್ ಬರ್ನ್ ಆಗಿದೆ. ನೀವು ಬಂಧನ ಮಾಡಿದ ಕಾರಣ ನಮ್ಮ ಮರ್ಯಾದೆ ಹೋಗಿದೆ. ಯಾವುದೇ ಟೆಸ್ಟ್ ಮಾಡೋದಿದ್ರು ಕೂಡ ವಕೀಲರು ಬರಲಿ ಎಂದು ಪೊಲೀಸರ ಎದುರು ಹಠ ಮಾಡಿದ್ದಾರೆ.
ತಲೆಗೂದಲು ಪರೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ನಟಿ ರಾಗಿಣಿ ದ್ವಿವೇದಿ ಅವರ ವಿಡಿಯೊ ಇದೀಗ ವೈರಲ್ ಅಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.