ADVERTISEMENT

ಪ್ರೀತಂ ಗುಬ್ಬಿ ನಿರ್ದೇಶನದ ‘ಬಾನದಾರಿಯಲ್ಲಿ’ ಹೀಗಿದ್ದಾರೆ ಗಣೇಶ್‌

​ಪ್ರಜಾವಾಣಿ ವಾರ್ತೆ
Published 13 ಮೇ 2022, 8:41 IST
Last Updated 13 ಮೇ 2022, 8:41 IST
‘ಬಾನದಾರಿಯಲ್ಲಿ’ ಗಣೇಶ್‌ ಫಸ್ಟ್‌ಲುಕ್‌
‘ಬಾನದಾರಿಯಲ್ಲಿ’ ಗಣೇಶ್‌ ಫಸ್ಟ್‌ಲುಕ್‌   

ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಕಾಂಬಿನೇಷನ್‌ನ ಹೊಸ ಚಿತ್ರದ ಶೀರ್ಷಿಕೆ ‘ಬಾನದಾರಿಯಲ್ಲಿ’ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದೀಗ ಚಿತ್ರತಂಡ ಹೊಸ ಅಪ್‌ಡೇಟ್‌ ನೀಡಿದ್ದು, ಚಿತ್ರದಲ್ಲಿನ ಗಣೇಶ್‌ ಅವರ ಫಸ್ಟ್‌ಲುಕ್‌ ರಿಲೀಸ್‌ ಆಗಿದೆ.

ಪ್ರೀತಂ ಗುಬ್ಬಿ ಆ್ಯಕ್ಷನ್‌ ಕಟ್‌ ಹೇಳಿದ್ದ ಸಿನಿಮಾಗಳೆಲ್ಲವೂ ಪ್ರೇಮಕಥೆಯನ್ನೇ ಹೊಂದಿದ್ದವು. ಹೊಸ ಚಿತ್ರವೂ ಇದೇ ಜಾನರ್‌ನ ಸಿನಿಮಾವೇ ಎನ್ನುವ ಪ್ರಶ್ನೆ ಗಣೇಶ್‌ ಅಭಿಮಾನಿಗಳಲ್ಲಿತ್ತು. ಇದಕ್ಕೆ ಟ್ವಿಟರ್‌ನಲ್ಲಿ ಉತ್ತರಿಸುವ ಗಣೇಶ್‌, ‘ಇದೊಂದು ಪ್ರೇಮಕಥೆಯಲ್ಲ. ಇದು ಪ್ರೇಮದ ಕುರಿತ ಕಥೆ’ ಎಂದಿದ್ದಾರೆ.

ಗಣೇಶ್‌ ಅವರ ಸಿನಿಪಯಣಕ್ಕೆ ತಿರುವು ನೀಡಿದ್ದ ‘ಮುಂಗಾರು ಮಳೆ’ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಂ ಗುಬ್ಬಿ, ಮತ್ತೊಂದು ಲವ್‌ಸ್ಟೋರಿಯೊಂದಿಗೆ ಬರುತ್ತಿದ್ದಾರೆ. ಗಣಿ–ಗುಬ್ಬಿ ಕಾಂಬಿನೇಷ್‌ನಲ್ಲಿ ಈ ಹಿಂದೆ ‘ಮಳೆಯಲಿ ಜೊತೆಯಲಿ’, ‘ದಿಲ್‌ ರಂಗೀಲಾ’ ಹಾಗೂ ‘99’ ಸಿನಿಮಾಮೂಡಿಬಂದಿತ್ತು. ‘ಬಾನದಾರಿಯಲ್ಲಿ’ ಸಿನಿಮಾದಲ್ಲಿ ಗಣೇಶ್‌ಗೆ ಜೋಡಿಯಾಗಿ ನಟಿರುಕ್ಮಿಣಿ ವಸಂತ್ ಕಾಣಿಸಿಕೊಳ್ಳಲಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.