ADVERTISEMENT

ಧರ್ಮ ಕೀರ್ತಿರಾಜ್, ಸೋನುಗೌಡ ನಟನೆಯ ‘ವಸುಂಧರಾದೇವಿ’ ಟೀಸರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2022, 4:11 IST
Last Updated 17 ಅಕ್ಟೋಬರ್ 2022, 4:11 IST
ಧರ್ಮ ಕೀರ್ತಿರಾಜ್
ಧರ್ಮ ಕೀರ್ತಿರಾಜ್   

ಧರ್ಮ ಕೀರ್ತಿರಾಜ್ ಹಾಗೂ ಸೋನುಗೌಡ ನಾಯಕ - ನಾಯಕಿಯಾಗಿ ನಟಿಸಿರುವ ‘ವಸುಂಧರಾ ದೇವಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್‌ಗೆ ಮೆಚ್ಚುಗೆ ಬಂದಿದೆ. ಈ ಸಂತೋಷವನ್ನು ಚಿತ್ರತಂಡ ಮಾಧ್ಯಮಗಳ ಮುಂದೆ ಹಂಚಿಕೊಂಡರು.

ನಿರ್ದೇಶಕಮಹೇಶ್ ಚಿನ್ಮಯ್ ಮಾತನಾಡಿ, ‘ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಧರ್ಮ ಕೀರ್ತಿರಾಜ್ ಅವರೊಡನೆ ಇದು ಎರಡನೇ ಚಿತ್ರ’ ಎಂದರು.

ಕಥೆಯಲ್ಲೇನಿದೆ?
‘ಮುಖ್ಯಮಂತ್ರಿಗಳ ಮಗಳು ತಾನು ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಮುಖ್ಯಮಂತ್ರಿ ಆಗುತ್ತಾಳೆ. ನಂತರ ಆಕೆಯ ಕೊಲೆಯಾಗುತ್ತದೆ. ಆ ಕೊಲೆ ಮಾಡಿದ್ದು ಯಾರು? ಎಂದು ಕಂಡು ಹಿಡಿಯಲು ತನಿಖಾಧಿಕಾರಿ ಬರುತ್ತಾರೆ‌. ತನಿಖೆ ಹೇಗೆ ನಡೆಯುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬೇಕು. ತನಿಖಾಧಿಕಾರಿ ಪಾತ್ರದಲ್ಲಿ(ತನಿಖಾಧಿಕಾರಿ) ಧರ್ಮ ಕೀರ್ತಿರಾಜ್ ಅಭಿನಯಿಸಿದ್ದಾರೆ. ವಸುಂಧರಾದೇವಿ ಪಾತ್ರದಲ್ಲಿ ಸೋನು ಗೌಡ ನಟಿಸಿದ್ದಾರೆ’ ಎಂದರು ಮಹೇಶ್‌.

ADVERTISEMENT

ಗೋವಿಂದೇಗೌಡ, ರೂಪೇಶ್, ಪೂಜಾ, ಸೆವೆನ್ ರಾಜ್ ತಾರಾಬಳಗದಲ್ಲಿದ್ದಾರೆ. ಚಿತ್ರ ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆಯಿದೆ ಎಂದು ನಿರ್ದೇಶಕ ಮಹೇಶ್ ಚಿನ್ಮಯ್ ತಿಳಿಸಿದರು. ಅಶೋಕ್‌ ಕವೇಟಿ ನಿರ್ಮಾಪಕರು.ಸಂಗೀತ ನಿರ್ದೇಶನ ವಿನು ಮನಸು ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.