ADVERTISEMENT

ಹಳೇ ಬೇರು; ಹೊಸ ಚಿಗುರುಗಳ ಸಮಾಗಮ‘ಮೇಡ್ ಇನ್ ಬೆಂಗಳೂರು’

​ಪ್ರಜಾವಾಣಿ ವಾರ್ತೆ
Published 3 ಮೇ 2022, 9:59 IST
Last Updated 3 ಮೇ 2022, 9:59 IST
ಮಧುಸೂದನ್ ಗೋವಿಂದ್
ಮಧುಸೂದನ್ ಗೋವಿಂದ್   

ಸ್ಟಾರ್ಟ್‌ಅಪ್‌ಗಳ ಕಥೆ ಹೇಳಲಿದೆ. ‘ಮೇಡ್‌ ಇನ್‌ ಬೆಂಗಳೂರು’.

ನವಪ್ರತಿಭೆ ಮಧುಸೂದನ್ ಗೋವಿಂದ್ ಅವರು ನಾಯಕರಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟರಾದ ಸಾಯಿಕುಮಾರ್‌, ಪ್ರಕಾಶ್ ಬೆಳವಾಡಿಯವರು ನಟಿಸಿದ್ದಾರೆ.

ಲಕ್ಷಾಂತರ ಕನಸುಗಳನ್ನು ತಮ್ಮ ಮುಗ್ದವಾದ ಕಣ್ಣುಗಳಲ್ಲಿ ಹೊತ್ತಿರುವ ಮೂವರು ಯುವಕರ ಕಥೆಯಲ್ಲಿ ಮಧುಸೂದನ್ ಗೋವಿಂದ್ ಅವರ ಜೊತೆಗೆ ಪುನೀತ್ ಮಾಂಜಾ, ವಂಶೀಧರ, ಹಿಮಾಂಶಿ ವರ್ಮಾ, ಶಂಕರಮೂರ್ತಿ,ಜೋರ್ಡ ಇಂಡಿಯಾನ್ ಖ್ಯಾತಿಯ ವಿನೀತ್ ಕುಮಾರ ಹಾಗು ಹಿರಿಯ ನಟರಾದ ಮಂದೀಪ್ ರೈ, ಸುಧಾ ಬೆಳವಾಡಿ, ಮಂಜುನಾಥ್ ಹೆಗ್ಡೆ ಹಾಗೂ ರಮೇಶ್ ಭಟ್ ಅನುರಾಗ್ ಪುತ್ತಿಗೆ ಮುಖ್ಯ ಪಾತ್ರಗಳಲ್ಲಿದ್ದಾರೆ.

ADVERTISEMENT

ಉದ್ಯಮಿ ಬಾಲಕೃಷ್ಣ ಬಿ.ಎಸ್. ಅವರು ‘ರಜನಿ ಥರ್ಸ್ಡೆ ಸ್ಟೋರೀಸ್’ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದು, ಪ್ರದೀಪ್ ಕೆ.ಶಾಸ್ತ್ರಿ ಅವರು ಕಥೆ ಬರೆದು ನಿರ್ದೇಶಿಸಿದ್ದಾರೆ. ಅಶ್ವಿನ್ ಪಿ. ಕುಮಾರ ಅವರ ಸಂಗೀತ ನಿರ್ದೇಶನ, ಭಜರಂಗ್ ಕೋಣಥಮ್ ಅವರ ಛಾಯಾಗ್ರಹಣ ಹಾಗೂ ಹಲವಾರು ಕಲಾತಂತ್ರಜ್ಞರ ಪರಿಶ್ರಮ ‘ಮೇಡ್ ಇನ್ ಬೆಂಗಳೂರು’ ಚಿತ್ರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.