ಅನಿತಾ ಭಟ್ ಹಾಗೂ ಪವನ್ ಶೆಟ್ಟಿ ನಟನೆಯ ‘ಉಗ್ರಾಣ’ ಚಿತ್ರದ ಫಸ್ಟ್‌ಲುಕ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ರಿಶಿಕೇಶ್ ಚಿತ್ರದ ನಿರ್ದೇಶನದ ಜೊತೆಗೆ ಸಂಕಲನ, ಛಾಯಾಚಿತ್ರಗ್ರಹಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
‘ಮಿಸ್ಟ್ರಿ, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವುದರಿಂದ ಕಥೆಯ ಎಳೆಯನ್ನು ಈಗಲೇ ಹೇಳುವುದಿಲ್ಲ. ಈ ‘ಉಗ್ರಾಣ’ ರಹಸ್ಯ ಹೊಂದಿರುವ ಜಾಗ. ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ಮೂಡಿಬರುತ್ತಿದೆ. ಬೆಂಗಳೂರು, ಹೈದರಬಾದ್, ಸಾಗರ, ತೀರ್ಥಹಳ್ಳಿ, ಮೂಡುಬಿದಿರೆ, ಸಿರ್ಸಿ, ಗೋಕರ್ಣ, ಹೊಸಗುಂದದ ಪುರಾತನ ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ’ ಎಂದಿದ್ದಾರೆ ನಿರ್ದೇಶಕರು.
ಈ ಚಿತ್ರದ ಮೂಲಕ ನಟಿ ಅನಿತಾ ಭಟ್ ನಿರ್ಮಾಪಕಿಯಾಗಿದ್ದು, ಎಬಿಸಿ ಪ್ರೊಡಕ್ಷನ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ತೆಲುಗಿನ ಷಫಿ, ಕೆ.ಜಿ.ಕೃಷ್ಣಮೂರ್ತಿ, ಸಿದ್ದು ಮೂಲಮನಿ, ಮಿಮಿಕ್ರಿ ಗೋಪಿ, ಜಯದೇವ್, ಕರಿಸುಬ್ಬು ಮುಂತಾದವರು ಚಿತ್ರದಲ್ಲಿದ್ದಾರೆ.
ಕವಿರಾಜ್ ಸಾಹಿತ್ಯವಿದ್ದು, ಆಕಾಶ್ ಪರ್ವ ಸಂಗೀತ ಸಂಯೋಜಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.