
ಸಂಗೀತ ಶೃಂಗೇರಿ
ಚಿತ್ರ: ಇನ್‌ಸ್ಟಾಗ್ರಾಂ
777 ಚಾರ್ಲಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ, ನಟಿ ಸಂಗೀತ ಶೃಂಗೇರಿ ಅವರ ಮೊದಲ ಪಾರ್ಟಿ ವೈಬ್ ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಹೊಚ್ಚ ಹೊಸ ಅಚ್ಚೂ (Achoo) ಆಲ್ಬಂ ಸಾಂಗ್‌ನಲ್ಲಿ ನಟಿ ಸಂಗೀತ ಶೃಂಗೇರಿ ಬೋಲ್ಡ್ ಲುಕ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.
ಈ ಬಗ್ಗೆ ನಟಿ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ, ಅವರ ಮೊದಲ ಆಲ್ಬಂ ಸಾಂಗ್ ಬಿಡುಗಡೆಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ನಮ್ರತಾ ಗೌಡ, ಕಾರ್ತಿಕ್ ಮಹೇಶ್, ಸಿರಿ, ನೀತು ವನಜಾಕ್ಷಿ, ಶಮಂತ್ ಗೌಡ ಭಾಗಿಯಾಗಿದ್ದರು.
ಇನ್ನು, ಈ ಹಾಡನ್ನು ಸೂರಜ್ ಜೋಯಿಸ್ ಸಂಗೀತ ಸಂಯೋಜಿಸಿದ್ದು, ಕನ್ನಡ ರಾಪರ್ ಎಂಸಿ ಬಿಜ್ಜು ನಟರಾಜ್ ಅವರು ಸಾಹಿತ್ಯ ಬರೆದು ಹಾಡಿದ್ದಾರೆ. ಸದ್ಯ ಇದೇ ಹಾಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಟಿ ಸಂಗೀತ ಶೃಂಗೇರಿ ಬೋಲ್ಡ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಅಚ್ಚೂ ಹಾಡಿನಲ್ಲಿ ನಟಿ ಭರ್ಜರಿಯಾಗಿ ಸ್ಟೇಪ್ ಹಾಕಿದ್ದಾರೆ.
ಸಂಗೀತಾ ಶೃಂಗೇರಿ ಅವರು ‘ಕರ್ಮ’ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. A+, ಮಾರಿಗೋಲ್ಡ್, 777 ಚಾರ್ಲಿ, ಹೀಗೆ ಒಟ್ಟು 9 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಬಿಗ್‌ಬಾಸ್ ಸೀಸನ್-10ರಲ್ಲಿ ಫಿನಾಲೆ ಹಂತಕ್ಕೆ ತಲುಪಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.