ADVERTISEMENT

ಆಸ್ಪತ್ರೆಗೆ ದಾಖಲಾದ ನಟಿ ಸಂಜನಾ ಗಲ್ರಾನಿ!

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 11:33 IST
Last Updated 25 ಆಗಸ್ಟ್ 2021, 11:33 IST
ಸಂಜನಾ ಗಲ್ರಾನಿ
ಸಂಜನಾ ಗಲ್ರಾನಿ   

ಬೆಂಗಳೂರು: ಅಂತರರಾಷ್ಟ್ರೀಯ ಡ್ರಗ್ಸ್‌ ಜಾಲ ಪ್ರಕರಣದಲ್ಲಿ ಮಾದಕ ವಸ್ತು ಸೇವನೆ ಮಾಡಿರುವುದು ‘ಕೂದಲು ಪರೀಕ್ಷೆ’ಯಿಂದ ದೃಢಪಟ್ಟಿರುವ ಬೆನ್ನಲ್ಲೇ, ನಟಿ ಸಂಜನಾ ಗಲ್ರಾನಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಮಾಹಿತಿಯನ್ನು ಸ್ವತಃ ಸಂಜನಾ ಅವರ ತಾಯಿ ರೇಷ್ಮಾ ಗಲ್ರಾನಿ ಅವರು ತಿಳಿಸಿದ್ದು, ‘ದೇವರು ಇದ್ದಾನೆ. ನಾವೇನು ತಪ್ಪು ಮಾಡಿಲ್ಲ. ಭಗವಂತನಿದ್ದಾನೆ ಅವನು ನಮ್ಮ ಕೈಬಿಡುವುದಿಲ್ಲ. ಸಂಜನಾಗೆ ಆರೋಗ್ಯ ಸರಿ ಇಲ್ಲ. ನಾವು ತುಂಬಾ ಬೇಸರದಲ್ಲಿ ಇದ್ದೇವೆ. ಮಾನಸಿಕವಾಗಿ ಸಂಜನಾ ತುಂಬಾ ಕುಗ್ಗಿಹೋಗಿದ್ದಾಳೆ. ಜೀವನದಲ್ಲಿ ಮುಂದೆ ಬರೋಣ ಎಂದು ಆಕೆ ಯೋಚಿಸುತ್ತಿದ್ದರೆ ಪದೇ ಪದೇ ಅದೇ ಮಾತುಗಳು ಕೇಳಿಬರುತ್ತಿವೆ. ಇದು ನಮ್ಮ ಗ್ರಹಚಾರವೋ ಏನೋ ಎಂದು ತಿಳಿದಿಲ್ಲ. ಸಂಜನಾ ಖಿನ್ನತೆಯಲ್ಲಿ ಇದ್ದಾಳೆ. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾಳೆ’ ಎಂದು ತಿಳಿಸಿದ್ದಾರೆ.

ಆದರೆ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿರುವ ಸಂಜನಾ ಅವರು ಬುಧವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್‌ ಶೇರ್‌ ಮಾಡಿದ್ದು, ‘ರೀಲ್ಸ್‌ ಮಾಡಿ ವಿಡಿಯೊ ಶೇರ್‌ ಮಾಡುವುದೇ ನನ್ನ ಕೆಲಸ. ದಯವಿಟ್ಟು ಟ್ರೋಲ್‌ ಮಾಡಬೇಡಿ. ನನ್ನನ್ನು ಅಥವಾ ನನ್ನ ವ್ಯಕ್ತಿತ್ವ ಇಷ್ಟ ಪಡದೇ ಇದ್ದರೆ ಅನ್‌ಫಾಲೊ ಮಾಡಿ. ನನ್ನ ವಿರೋಧಿಗಳಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.