ADVERTISEMENT

‘ಸಂಜು ವೆಡ್ಸ್ ಗೀತಾ -2’ ಪ್ರಾರಂಭ

ಪ್ರಜಾವಾಣಿ ವಿಶೇಷ
Published 17 ಆಗಸ್ಟ್ 2023, 23:40 IST
Last Updated 17 ಆಗಸ್ಟ್ 2023, 23:40 IST
ಶ್ರೀನಗರ ಕಿಟ್ಟಿ ರಚಿತಾ ರಾಮ್‌
ಶ್ರೀನಗರ ಕಿಟ್ಟಿ ರಚಿತಾ ರಾಮ್‌   

ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್‌ ಮುಖ್ಯ ಭೂಮಿಕೆಯಲ್ಲಿರುವ ‘ಸಂಜು ವೆಡ್ಸ್‌ ಗೀತಾ–2’ ಚಿತ್ರಕ್ಕೆ ಇತ್ತೀಚೆಗಷ್ಟೇ ಚಾಲನೆ ದೊರೆಯಿತು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರೆ, ಎಸ್‌.ಮಹೇಂದರ್‌ ಚಿತ್ರದ ಟೀಸರ್‌ ಬಿಡುಗಡೆ ಮಾಡಿದರು. 

‘ಸಂಜು ವೆಡ್ಸ್ ಗೀತಾ’  ಚಿತ್ರ 2011ರಲ್ಲಿ ತೆರೆ ಕಂಡಿತ್ತು. ಇದನ್ನು ನಿರ್ದೇಶಿಸಿದ್ದ ನಾಗಶೇಖರ್ ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ. 

‘ನಾನು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾಗ ಕರೆದು ತಮ್ಮ ನಿರ್ದೇಶನದ ‘ನಿನಗಾಗಿ’ ಚಿತ್ರದಲ್ಲಿ ಅವಕಾಶ ನೀಡಿದವರು ಎಸ್.ಮಹೇಂದರ್. ಅವರು ನಮ್ಮ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾವನ್ನು 5 ವರ್ಷಗಳ ಹಿಂದೆಯೇ ಪ್ರಾರಂಭಿಸಬೇಕಾಗಿತ್ತು. ಆದರೆ ನಾನು ತೆಲುಗು, ತಮಿಳು ಕಡೆ ಹೋಗಿದ್ದರಿಂದ ಆಗಲಿಲ್ಲ. ಹಿಂದಿನ ಚಿತ್ರದಲ್ಲಿದ್ದ ಬಹುತೇಕರು ಇದರಲ್ಲೂ ಇರುತ್ತಾರೆ. ನಾನು ಚಿತ್ರದಲ್ಲಿ ಕಥೆಯ ಜೊತೆ ಹಾಡುಗಳಿಗೂ ಜಾಸ್ತಿ ಪ್ರಾಮುಖ್ಯ ಕೊಡುತ್ತೇನೆ. ಶ್ರೀಧರ್ ಸಂಭ್ರಮ್ ಸೊಗಾಸದ 5 ಹಾಡುಗಳನ್ನು ನೀಡಿದ್ದಾರೆ’ ಎಂದು ಮಾಹಿತಿ ಬಿಚ್ಚಿಟ್ಟರು ನಿರ್ದೇಶಕ ನಾಗಶೇಖರ್‌.

ADVERTISEMENT

ನಾಯಕ ಕಿಟ್ಟಿ ಮಾತನಾಡಿ, ‘ನಾಗಶೇಖರ್ ಚಿತ್ರದ ಕಥೆಗೆ ಹೆಚ್ಚು ಒತ್ತು ನೀಡುತ್ತಾರೆ. ನನ್ನ ಉತ್ತಮ ಸಿನಿಮಾಗಳಲ್ಲಿ ‘ಸಂಜು ವೆಡ್ಸ್‌ ಗೀತಾ’ ಕೂಡ ಒಂದು. ಅದ್ಭುತವಾದ ಪ್ರೇಮಕಥೆಯೊಂದಿಗೆ ಮತ್ತೆ ಬರುತ್ತೇವೆ. ಮೊದಲ ಚಿತ್ರಕ್ಕಿಂತ ಈ ಚಿತ್ರದ ಪಾತ್ರ ಚೆನ್ನಾಗಿದೆ. ರಚಿತಾ ರಾಮ್ ಅವರ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದೇನೆ’ ಎಂದರು.

ಶ್ರೀಧರ್ ವಿ. ಸಂಭ್ರಮ್ ಸಂಗೀತ ನಿರ್ದೇಶನ, ಸತ್ಯ ಹೆಗಡೆ ಛಾಯಾಗ್ರಾಹಣ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.