ADVERTISEMENT

ಸುಶಾಂತ್‌ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಸಾರಾ ಅಲಿ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2021, 9:55 IST
Last Updated 8 ಡಿಸೆಂಬರ್ 2021, 9:55 IST
ಸೈಫ್‌ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್
ಸೈಫ್‌ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್   

ಬೆಂಗಳೂರು: ಸೈಫ್‌ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಬಾಲಿವುಡ್‌ಗೆ ಬಂದು ಮೂರು ವರ್ಷಗಳಾಯಿತು. ಈ ಸಂದರ್ಭದಲ್ಲಿ ಅವರು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೆನಪಿಸಿಕೊಂಡಿದ್ದಾರೆ.

ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಸಾರಾ ಅಲಿ ಖಾನ್ ಈ ಬಗ್ಗೆ ಪೋಸ್ಟ್ ಒಂದನ್ನು ಮಾಡಿದ್ದು, ‘ಕೇದಾರ್‌ನಾಥ್‘ ಚಿತ್ರದ ಸನ್ನಿವೇಶವನ್ನು ನೆನಪಿಸಿಕೊಂಡಿದ್ದಾರೆ.

ಕೇದಾರ್‌ನಾಥ್ ಚಿತ್ರದ ಮೂಲಕ ಸಾರಾ ಅವರು ಬಾಲಿವುಡ್ ಪ್ರವೇಶ ಮಾಡಿದ್ದರು.

ADVERTISEMENT

ಸುಶಾಂತ್ ಅವರೊಬ್ಬ ಉತ್ತಮ ಗೆಳೆಯ, ಮಾರ್ಗದರ್ಶಕ. ನನ್ನ ಸಿನಿಮಾ ಬದುಕಿಗೆ ಅವರು ಮುನ್ನುಡಿ ಬರೆದಿದ್ದರು ಎಂದು ಸಾರಾ ನೆನಪಿಸಿಕೊಂಡಿದ್ದಾರೆ.

ಸುಶಾಂತ್ ಅವರನ್ನು ನಾನಿಂದು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಅಂದಿನ ನೆನಪುಗಳು ಇನ್ನೂ ನನ್ನಲ್ಲಿ ಹಸಿರಾಗಿವೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.