ADVERTISEMENT

Kannada Movie: ‘ಸರಳ ಸುಬ್ಬರಾವ್‌’ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 23:30 IST
Last Updated 5 ಫೆಬ್ರುವರಿ 2026, 23:30 IST
ಮಿಶಾ ನಾರಂಗ್, ಅಜೇಯ್ ರಾವ್ 
ಮಿಶಾ ನಾರಂಗ್, ಅಜೇಯ್ ರಾವ್    

ಮಂಜು ಸ್ವರಾಜ್‌ ನಿರ್ದೇಶನದ, ಅಜೇಯ್‌ ರಾವ್‌ ನಟನೆಯ ‘ಸರಳ ಸುಬ್ಬರಾವ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಸಿನಿಮಾ ಫೆ.12ರಂದು ತೆರೆಕಾಣಲಿದೆ. 

ರಿಯಾನ್ ಕ್ರಿಯೇಷನ್ಸ್ ಲಾಂಛನದಲ್ಲಿ ಲೋಹಿತ್ ನಂಜುಂಡಯ್ಯ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅಜೇಯ್‌ ರಾವ್‌ ಅವರಿಗೆ ಮಿಶಾ ನಾರಂಗ್ ಜೋಡಿಯಾಗಿದ್ದಾರೆ. 1970ರ ಕಾಲಘಟ್ಟದ ಪ್ರೇಮಕಥೆಯನ್ನು ಈ ಸಿನಿಮಾ ಹೊಂದಿದೆ. 

‘ಇದು ತ್ರಿವೇಣಿ ಅವರ ಕಾದಂಬರಿ ಆಧರಿಸಿದ ಕಥೆ. ಈವರೆಗೂ ಕನ್ನಡದಲ್ಲಿ ತ್ರಿವೇಣಿ ಅವರ ಕಾದಂಬರಿಗಳನ್ನು ಆಧರಿಸಿ ಬಂದಿರುವ ಚಿತ್ರಗಳೆಲ್ಲಾ ಗೆದ್ದಿವೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಕಥೆ ಇದಾಗಿದೆ. ನೂರು ವರ್ಷಗಳ ಇತಿಹಾಸವಿರುವ ಮೈಸೂರಿನ ಮನೆಯೊಂದರಲ್ಲಿ ನಮ್ಮ ಚಿತ್ರದ ಚಿತ್ರೀಕರಣ ನಡೆದಿದೆ. ರಂಗಾಯಣ ರಘು, ವೀಣಾ ಸುಂದರ್, ಶ್ರೀ, ರಘು ರಾಮನಕೊಪ್ಪ, ವಿಜಯ್ ಚಂಡೂರ್ ಹೀಗೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ‌. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಪ್ರದೀಪ್ ಪದ್ಮಕುಮಾರ್ ಛಾಯಾಚಿತ್ರಗ್ರಹಣ ಹಾಗೂ ಬಸವರಾಜ್ ಅರಸ್ ಸಂಕಲನ ಸಿನಿಮಾಗಿದೆ’ ಎಂದು ಮಾಹಿತಿ ನೀಡಿದರು ಮಂಜು ಸ್ವರಾಜ್.

ADVERTISEMENT

‘ಸಿನಿಮಾದಲ್ಲಿ ರೆಟ್ರೊ ಶೈಲಿಯಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರೇಮಿಗಳ ದಿನದ ಸಂದರ್ಭದಲ್ಲಿ ನಮ್ಮ ಚಿತ್ರ ತೆರೆಗೆ ಬರಲಿದೆ. ಇದೊಂದು ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾ’ ಎಂದರು ಅಜೇಯ್‌ ರಾವ್‌. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.