ADVERTISEMENT

‘ಜೊತೆ ಜೊತೆಯಲಿ’ ಶೀರ್ಷಿಕೆ ಗೀತೆ ಒಂದು ಕೋಟಿ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 5:05 IST
Last Updated 12 ಜೂನ್ 2020, 5:05 IST
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನಿರುದ್ಧ ಮತ್ತು ಮೇಘನಾ ಶೆಟ್ಟಿ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನಿರುದ್ಧ ಮತ್ತು ಮೇಘನಾ ಶೆಟ್ಟಿ   

ಜೀ಼ಕನ್ನಡದಲ್ಲಿಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ’ಯ ಶೀರ್ಷಿಕೆಗೀತೆಯನ್ನು ಯೂಟ್ಯೂಬ್‌ನಲ್ಲಿ ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದು, ಹೊಸ ದಾಖಲೆ ಮಾಡಿದೆ.

‘ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು...ಜೊತೆಜೊತೆಯಲಿ’ – ಶೀರ್ಷಿಕೆ ಗೀತೆ ಅಷ್ಟು ಜನಪ್ರಿಯಗೊಂಡಿದೆ.

ಸುನಾದ್ಗೌತಮ್ಸಂಗೀತಸಂಯೋಜನೆಯಈಗೀತೆಯನ್ನುಹರ್ಷಪ್ರಿಯಭದ್ರಾವತಿರಚಿಸಿದ್ದಾರೆ. ನಿನಾದನಾಯಕ್,ನಿಹಾಲ್ತಾವ್ರೊ,ರಜತ್ಹೆಗ್ಡೆಹಾಡಿದ್ದಾರೆ.

ADVERTISEMENT

ಧಾರಾವಾಹಿಯಶೀರ್ಷಿಕೆ ಗೀತೆಯೊಂದು ಹೀಗೆ ಕೋಟಿ ವೀಕ್ಷಣೆ ಪಡೆದಿರುವುದು ಖುಷಿಯ ಸಂಗತಿ. ಕನ್ನಡ ಕಿರುತೆರೆ ಲೋಕದಲ್ಲಿ ಇದೊಂದು ಸಾಧನೆ. ಧಾರಾವಾಹಿಯ ಜನಪ್ರಿಯತೆಗೂ ಇದು ಸಾಕ್ಷಿ ಎಂದು ಜೀ ಕನ್ನಡ ಬ್ಯುಸಿನೆಸ್‌ ಮುಖ್ಯಸ್ಥ ರಾಘವೇಂದ್ರ ಹುಣಸೂರು ಹೇಳಿದ್ದಾರೆ.ಈ ಧಾರಾವಾಹಿಯಲ್ಲಿ ಅನಿರುದ್ಧ್, ಮೇಘಾ ಶೆಟ್ಟಿ, ಆರೂರು ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಮೊದಲಾದವರು ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.