ADVERTISEMENT

ಶಾರುಕ್ ಖಾನ್ ಬಾಕ್ಸ್ ಆಫೀಸ್ ಬಾದ್‌ಶಾ! ಜವಾನ್ ಬಗ್ಗೆ ರಾಜಮೌಳಿ ಮೆಚ್ಚುಗೆ

‘ವ್ಹಾ.. ಎಂತಹ ಓಪನಿಂಗ್ ಜವಾನ್ ಚಿತ್ರದ ಬಾಕ್ಸ್ ಆಫೀಸ್ ಓಪನಿಂಗ್ ಭೂಮಿಯನ್ನೇ ನಡುಗಿಸುವಂತದ್ದು’ ಎಂದು ಬಣ್ಣಿಸಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಸೆಪ್ಟೆಂಬರ್ 2023, 6:40 IST
Last Updated 9 ಸೆಪ್ಟೆಂಬರ್ 2023, 6:40 IST
<div class="paragraphs"><p>ಶಾರುಕ್ , ರಾಜಮೌಳಿ </p></div>

ಶಾರುಕ್ , ರಾಜಮೌಳಿ

   

ಬೆಂಗಳೂರು: ಆಟ್ಲಿ ನಿರ್ದೇಶನದ, ನಟ ಶಾರುಕ್ ಖಾನ್ ಮುಖ್ಯ ಪಾತ್ರದಲ್ಲಿರುವ ಜವಾನ್ ಚಿತ್ರ ಸೆ.7 ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಿನಿ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಈ ಚಿತ್ರದ ಬಗ್ಗೆ ವ್ಯಾಪಕ ಮೆಚ್ಚುಗೆಗಳು ಕೇಳಿ ಬರುತ್ತಿವ ಬೆನ್ನಲ್ಲೇ ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರು ನಟ ಶಾರುಕ್ ಖಾನ್ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ADVERTISEMENT

‘ಶಾರುಕ್ ಖಾನ್ ಬಾಕ್ಸ್‌ ಆಫೀಸ್ ಬಾದ್‌ಶಾ’ ಎಂದು ಬಣ್ಣಿಸಿರುವ ಅವರು, ‘ವ್ಹಾ.. ಎಂತಹ ಓಪನಿಂಗ್ ಜವಾನ್ ಚಿತ್ರದ ಬಾಕ್ಸ್ ಆಫೀಸ್ ಓಪನಿಂಗ್ ಭೂಮಿಯನ್ನೇ ನಡುಗಿಸುವಂತದ್ದು’ ಎಂದು ಬಣ್ಣಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಜಮೌಳಿ, ‘ಶುಭಾಶಯಗಳು ಆಟ್ಲಿ ಅವರೇ ನಿಮ್ಮ ನಿರಂತರ ಯಶಸ್ಸು ಉತ್ತರದತ್ತಲೂ ಮುನ್ನುಗ್ಗುತ್ತಿದೆ. ಇಡೀ ಚಿತತಂಡಕ್ಕೆ ಶುಭಾಶಯಗಳು’ ಎಂದು ತಿಳಿಸಿದ್ದಾರೆ.

ಅನೇಕ ಅಭಿಮಾನಿಗಳು ಶಾರುಕ್ ಖಾನ್ ಜೊತೆ ನೀವು ಯಾವಾಗ ಸಿನಿಮಾ ಮಾಡುತ್ತೀರಾ ಎಂದು ರಾಜಮೌಳಿ ಅವರನ್ನು ಪ್ರಶ್ನಿಸಿದ್ದಾರೆ.

ಜವಾನ್ ಒಂದೇ ದಿನದಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹129.6 ಕೋಟಿ ಬಾಚಿದೆ ಎಂದು ವರದಿಯಾಗಿದೆ. ಸೆಪ್ಟೆಂಬರ್ 7ರಂದು ಜವಾನ್ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆ ಕಂಡಿದೆ.

ಈ ಚಿತ್ರದಲ್ಲಿ ನಯನತಾರಾ, ದೀಪಿಕಾ ಪಡುಕೋಣೆ ವಿಶೇಷ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದಾರೆ. ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾಹ್ ಖುರೇಷಿ, ರಿಧಿ ದೊಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಾ ತಾರಾಗಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.