ADVERTISEMENT

ಬಾಲಿವುಡ್ | ‘ಜೆರ್ಸಿ’ ಬಳಿಕ ಆ್ಯಕ್ಷನ್‌ ಸಿನಿಮಾದಲ್ಲಿ ಶಾಹೀದ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 20:15 IST
Last Updated 9 ಏಪ್ರಿಲ್ 2020, 20:15 IST
   

‘ಜೆರ್ಸಿ’ ತೆಲುಗು ರಿಮೇಕ್‌ ಸಿನಿಮಾದ ನಂತರ ನಟ ಶಾಹೀದ್‌ ಕಪೂರ್‌ ಆ್ಯಕ್ಷನ್‌ ಚಿತ್ರದಲ್ಲಿ ನಟಿಸಲಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ ಮೂಲಕ ಹೇಳಿಕೊಂಡಿದ್ದು, ಆ ಹೊಸ ಚಿತ್ರದ ಬಗ್ಗೆ ತಮ್ಮ ಅಭಿಮಾನಿಗಳ ಜೊತೆ ಹೇಳಿಕೊಂಡಿದ್ದಾರೆ.

ಲಾಕ್‌ಡೌನ್‌ ಆಗಿದ್ದರಿಂದ ‘ಜೆರ್ಸಿ’ ಸಿನಿಮಾದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಶಾಹೀದ್‌ ಮನೆ ಮಂದಿ ಜೊತೆಗೆ ಕ್ವಾರಂಟೈನ್‌ ಸಮಯವನ್ನು ಕಳೆಯುತ್ತಿದ್ದಾರೆ. ಈಚೆಗೆ ಶಾಹೀದ್‌ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ರೌಂಡ್‌ ನಡೆಸಿದ್ದರು. ಆಗ ಅಭಿಮಾನಿಯೊಬ್ಬರು ಆ್ಯಕ್ಷನ್‌ ಸಿನಿಮಾ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.ಇದಕ್ಕೆ ಶಾಹೀದ್‌, ‘ಹೌದು,ಜೆರ್ಸಿ ನಂತರ ನಾನು ಆ್ಯಕ್ಷನ್‌ ಸಿನಿಮಾ ಮಾಡುತ್ತಿದ್ದೇನೆ’ ಎಂದು ಉತ್ತರಿಸಿದ್ದಾರೆ.

ಹಾಗೇ ಕಿಯಾರ ಅಡ್ವಾಣಿ ಜೊತೆ ಮತ್ತೊಂದು ಸಿನಿಮಾ ಮಾಡುತ್ತೀರಾ ಎಂಬ ಪ್ರಶ್ನೆಗೆ ‘ಅವರಿಗೆ ಯಾವ ಡೇಟ್ಸ್‌ ಸಿಗುತ್ತೊ, ಆಗ ಖಂಡಿತ ನಟಿಸುತ್ತೇನೆ’ ಎಂದು ಹೇಳಿದ್ದಾರೆ.

ADVERTISEMENT

ಈ ನಟ ‘ಎಲ್ಲರೂ ಮನೆಯೊಳಗೇ ಸುರಕ್ಷಿತವಾಗಿರಿ. ಕೊರೊನಾ ವೈರಸ್‌ ಅನ್ನು ದೂರ ಮಾಡೋಣ’ ಎಂದು ಅಭಿಮಾನಿಗಳಿಗೆ ಕಿವಿಮಾತನ್ನೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.