ADVERTISEMENT

ಆನ್‌ಲೈನ್‌ನಲ್ಲಿ ಸೋರಿಕೆಯಾದ ಶಾಹಿದ್ ಕಪೂರ್ ಜೆರ್ಸಿ ಸಿನಿಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 16:06 IST
Last Updated 22 ಏಪ್ರಿಲ್ 2022, 16:06 IST
ಬಾಲಿವುಡ್ ನಟ ಶಾಹಿದ್ ಕಪೂರ್
ಬಾಲಿವುಡ್ ನಟ ಶಾಹಿದ್ ಕಪೂರ್    

ಬೆಂಗಳೂರು:ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಹೊಸ ಸಿನಿಮಾ ‘ಜೆರ್ಸಿ‘ ಪೂರ್ತಿಯಾಗಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.

ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ ಏಪ್ರಿಲ್ 22ರಂದು ಬಿಡುಗಡೆಯಾಗಿದೆ.

ಆದರೆ, ಬಿಡುಗಡೆಯಾದ ಮೊದಲ ದಿನವೇ ಚಿತ್ರ ತಮಿಳುರಾಕರ್ಸ್, ಮೂವಿರೂಲ್ಸ್, ಟೆಲಿಗ್ರಾಂ ಮತ್ತು ಇತರ ಕೆಲವು ಟೊರೆಂಟ್ ಸೈಟ್‌ಗಳಲ್ಲಿ ಸೋರಿಕೆಯಾಗಿದೆ ಎಂದು ಡಿಎನ್‌ಎ ವರದಿ ಮಾಡಿದೆ.

ADVERTISEMENT

ಆರಂಭದಲ್ಲಿ ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಿನಿಮಾ ಬಿಡುಗಡೆ ತಡವಾಗಿತ್ತು. ನಂತರದಲ್ಲಿ ಕೆಲವೊಂದು ಕಾನೂನು ಸಮಸ್ಯೆಗಳಿಂದಾಗಿ ಸಿನಿಮಾ ನಿಗದಿತ ದಿನಾಂಕದಂದು ತೆರೆಕಂಡಿರಲಿಲ್ಲ.

ಅರ್ಜುನ್ ತಲ್ವಾರ್ ಎಂಬ ಕ್ರಿಕೆಟರ್ ಪಾತ್ರದಲ್ಲಿ ಶಾಹಿದ್ ಕಪೂರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 2, ಆರ್‌ಆರ್‌ಆರ್‌, ಅಟ್ಯಾಕ್ ಸಹಿತ ಹಲವು ಸಿನಿಮಾಗಳು ಟೊರೆಂಟ್ ಸೈಟ್‌ಗಳಲ್ಲಿ ಸೋರಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.