ADVERTISEMENT

ವಿಡಿಯೊ ನೋಡಿ: 'ಶೇರ್‌ಶಾ'ದ ಕಿಯಾರಾ ಅಡ್ವಾಣಿಯಂತೆ ಕಣ್ಣೀರು ತರಿಸಿದ 9ರ ಬಾಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಸೆಪ್ಟೆಂಬರ್ 2021, 6:40 IST
Last Updated 2 ಸೆಪ್ಟೆಂಬರ್ 2021, 6:40 IST
ಶೇರ್‌ಶಾ ಚಿತ್ರದ ದೃಶ್ಯ. ಚಿತ್ರ ಕೃಪೆ–ಕಿಯಾರಾ ಅಡ್ವಾಣಿ ಇನ್‌ಸ್ಟಾಗ್ರಾಂ
ಶೇರ್‌ಶಾ ಚಿತ್ರದ ದೃಶ್ಯ. ಚಿತ್ರ ಕೃಪೆ–ಕಿಯಾರಾ ಅಡ್ವಾಣಿ ಇನ್‌ಸ್ಟಾಗ್ರಾಂ   

ಬೆಂಗಳೂರು: ಕಾರ್ಗಿಲ್ ಯುದ್ಧದ ಹುತಾತ್ಮನ ಕಥೆ ಆಧರಿಸಿ ಇತ್ತೀಚೆಗೆ ಬಿಡುಗಡೆಯಾಗಿರುವ ‘ಶೇರ್‌ಶಾ‘ ಬಾಲಿವುಡ್ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದರಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಪಾತ್ರದಲ್ಲಿ ಸಿದ್ದಾರ್ಥ ಮಲ್ಹೊತ್ರಾ ಅಭಿನಯಿಸಿದರೆ, ಡಿಂಪಲ್ ಚೀಮಾ ಪಾತ್ರದಲ್ಲಿ ಕಿಯಾರಾ ಅಡ್ವಾಣಿ ಅಭಿನಯಿಸಿದ್ದಾರೆ. ಅದರಲ್ಲೂ ಕಿಯಾರಾ ಅವರ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.

ವಿಕ್ರಮ್ ಬಾತ್ರಾ ಅಂತ್ಯಸಂಸ್ಕಾರದ ವೇಳೆ (ಚಿತ್ರದಲ್ಲಿ ಬರುವ ಸನ್ನಿವೇಶ) ಕಿಯಾರಾ ಅಳುವ ದೃಶ್ಯವಂತೂ ಹಲವರಲ್ಲಿ ಕಣ್ಣೀರು ತರಿಸುತ್ತಿದೆ. ಈಗ ಇದೇ ದೃಶ್ಯವನ್ನು ಅನುಕರಿಸಿ ಬಾಲೆಯೊಬ್ಬಳು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಶೇರ್ ಮಾಡಿಕೊಂಡಿದ್ದು, ಬಾಲೆಯ ನಟನೆಯೂ ಕೂಡ ಕಿಯಾರಾ ಅವರನ್ನು ಮೀರಿಸುವಂತಿದೆ.

ADVERTISEMENT

ಈ ದೃಶ್ಯ ನೋಡಿರುವ ನೆಟ್ಟಿಗರು ‘ನೀನು ಸಹ ನಮ್ಮ ಕಣ್ಣಲ್ಲಿ ನೀರು ತರಿಸಿದೆ‘ ಎಂದು ಕಾಮೆಂಟ್ ಮಾಡಿದ್ದಾರೆ. ಕಿಯಾರಾ ಖನ್ನಾ ಎನ್ನುವ 9 ವರ್ಷದ ಬಾಲಕಿ ಈ ವಿಡಿಯೊ ಮಾಡಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.