ADVERTISEMENT

ಸ್ವಾಗತ ಕೋರಿದ ‘ಜಸ್ಟ್‌ ಮ್ಯಾರೀಡ್‌’ ಜೋಡಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 13:41 IST
Last Updated 17 ಫೆಬ್ರುವರಿ 2025, 13:41 IST
ಶೈನ್‌ ಶೆಟ್ಟಿ, ಅಂಕಿತಾ ಅಮರ್‌ 
ಶೈನ್‌ ಶೆಟ್ಟಿ, ಅಂಕಿತಾ ಅಮರ್‌    

‘ಬಿಗ್‌ಬಾಸ್‌’ ಖ್ಯಾತಿಯ ನಟ ಶೈನ್‌ ಶೆಟ್ಟಿ ಹಾಗೂ ಅಂಕಿತಾ ಅಮರ್‌ ನಟಿಸಿರುವ ‘ಜಸ್ಟ್‌ ಮ್ಯಾರೀಡ್‌’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ‘ಇದು ಮೊದಲನೇ ಸ್ವಾಗತಾನಾ...’ ಎಂಬ ಹಾಡನ್ನು ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ರಿಲೀಸ್‌ ಮಾಡಿದರು.   

ಎಬಿಬಿಎಸ್ ಸ್ಟುಡಿಯೊಸ್‌ ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಅವರು ನಿರ್ಮಿಸಿರುವ, ಸಿ.ಆರ್.ಬಾಬಿ ನಿರ್ದೇಶನದ ಈ ಚಿತ್ರವನ್ನು ಕೆ.ಆರ್‌.ಜಿ. ಸ್ಟುಡಿಯೋಸ್‌ ವಿತರಣೆ ಮಾಡುತ್ತಿದೆ. ಕೆ.ಕಲ್ಯಾಣ್ ಅವರು ಈ ಹಾಡನ್ನು ಬರೆದಿದ್ದು, ಜಸ್ಕರಣ್‌ ಸಿಂಗ್‌ ಹಾಡಿದ್ದಾರೆ. ‘ಈ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆದಿದೆ. ನಾನೇ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದೇನೆ.  ಈಗಷ್ಟೇ ಮದುವೆಯಾದ ಜೋಡಿಗೆ ನಮ್ಮ ಈ ಚಿತ್ರ ಬಹಳ ಹತ್ತಿರವಾಗಲಿದೆ. ಒಂದೊಳ್ಳೆಯ ಪ್ರೇಮಕಥೆ ಇದಾಗಿದ್ದು, ತೆರೆಗೆ ಬರಲು ಚಿತ್ರ ಸಿದ್ಧವಾಗಿದೆ’ ಎನ್ನುತ್ತಾರೆ ನಿರ್ದೇಶಕಿ ಸಿ.ಆರ್.ಬಾಬಿ. ಬಾಬಿ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದು, ರಘು ನಿಡುವಳ್ಳಿ ಚಿತ್ರದ ಸಂಭಾಷಣೆ ಬರೆದಿದ್ದಾರೆ. ದೇವರಾಜ್, ಅಚ್ಯುತ್‌ ಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್ ಮತ್ತಿತರರು ತಾರಾಬಳಗದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT