ADVERTISEMENT

ನಟ ಶಿವ ಕಾರ್ತಿಕೇಯನ್, ರುಕ್ಮಿಣಿ ವಸಂತ್‌ ಅಭಿನಯದ 'ಮದರಾಸಿ' ಸೆ.5ಕ್ಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 10:26 IST
Last Updated 15 ಏಪ್ರಿಲ್ 2025, 10:26 IST
<div class="paragraphs"><p>ಚಿತ್ರದ ಪೋಸ್ಟರ್</p></div>

ಚಿತ್ರದ ಪೋಸ್ಟರ್

   

ಚೆನ್ನೈ: ಅಮರನ್‌ ಸಿನಿಮಾ ಖ್ಯಾತಿಯ ನಟ ಶಿವ ಕಾರ್ತಿಕೇಯನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಮದರಾಸಿ' ಸೆಪ್ಟೆಂಬರ್‌ 5ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ 'ಶ್ರೀ ಲಕ್ಷ್ಮೀ ಮೂವೀಸ್‌' ಪೋಸ್ಟ್‌ ಹಂಚಿಕೊಂಡು ಮಾಹಿತಿ ನೀಡಿದೆ.

ADVERTISEMENT

ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಅನ್ನು ಕಾರ್ತಿಕೇಯನ್ ಹುಟ್ಟುಹಬ್ಬದಂದು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಚಿತ್ರಕ್ಕೆ ನಿರ್ದೇಶಕ ಎ.ಆರ್.ಮುರುಗದಾಸ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

2014ರಲ್ಲಿ ಮುರುಗದಾಸ್ ಮತ್ತು ಶಿವಕಾರ್ತಿಕೇಯನ್ ಅವರು ಜತೆಯಾಗಿ 'ಮಾನ್ ಕರಾಟೆ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಶಿವಕಾರ್ತಿಕೇಯನ್‌ ಜತೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಖ್ಯಾತಿಯ ರುಕ್ಮಿಣಿ ವಸಂತ್‌ ಕಾಣಿಸಿಕೊಳ್ಳಲಿದ್ದಾರೆ.

ಅಮರನ್’ ಬಳಿಕ ಶಿವಕಾರ್ತಿಕೇಯನ್‌ ನಟಿಸುತ್ತಿರುವ ಚಿತ್ರ ಇದಾಗಿದ್ದು, ಆ್ಯಕ್ಷನ್‌ ಜಾನರ್‌ನ ಸಿನಿಮಾವಾಗಿದೆ. ಚಿತ್ರಕ್ಕೆ ಸುದೀಪ್ ಎಲಾಮನ್ ಛಾಯಾಚಿತ್ರಗ್ರಹಣ, ಅನಿರುದ್ಧ್‌ ರವಿಚಂದರ್ ಸಂಗೀತ ನಿರ್ದೇಶನವಿದೆ. ಈ ಚಿತ್ರಕ್ಕೆ ಶ್ರೀಕರ್ ಪ್ರಸಾದ್ ಸಂಕಲನ, ಅರುಣ್ ವೆಂಜಾರಮೂಡು ಕಲಾ ನಿರ್ದೇಶನ, ಕೆವಿನ್ ಮಾಸ್ಟರ್ ಮತ್ತು ದಿಲೀಪ್ ಮಾಸ್ಟರ್ ಸಾಹಸ ನಿರ್ದೇಶನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.