ADVERTISEMENT

‘ಟಗರು’ ಜೋಡಿಯ ಹೊಸ ಪ್ರಾಜೆಕ್ಟ್‌: ಇದೇ ನೋಡಿ ‘ಆಪರೇಷನ್‌’ ಲುಕ್‌

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 23:30 IST
Last Updated 15 ಸೆಪ್ಟೆಂಬರ್ 2025, 23:30 IST
<div class="paragraphs"><p>ಶಿವರಾಜ್‌ಕುಮಾರ್‌, ಹೇಮಂತ್‌ ಎಂ.ರಾವ್‌</p></div>

ಶಿವರಾಜ್‌ಕುಮಾರ್‌, ಹೇಮಂತ್‌ ಎಂ.ರಾವ್‌

   

‘ಟಗರು’ ಜೋಡಿಯ ಹೊಸ ಪ್ರಾಜೆಕ್ಟ್‌ನ ಶೂಟಿಂಗ್‌ ಬೆಂಗಳೂರಿನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಹೇಮಂತ್‌ ಎಂ.ರಾವ್‌ ನಿರ್ದೇಶನದ ‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ನ ಮೇಕಿಂಗ್‌ ಫೋಟೊಗಳನ್ನು ಚಿತ್ರತಂಡ ಹಂಚಿಕೊಂಡಿದ್ದು, ಇದು ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. 

ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ನಟರಾದ ಶಿವರಾಜ್‌ಕುಮಾರ್‌ ಹಾಗೂ ಧನಂಜಯ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಇದು ವರನಟ ರಾಜ್‌ಕುಮಾರ್‌ ಅವರ ‘ಬಾಂಡ್‌ ಸರಣಿ’ಯ ಸಿನಿಮಾಗಳ ನೆನಪು ಮೂಡಿಸಿವೆ. ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಎರಡನೇ ಹಂತಕ್ಕೆ ಸಜ್ಜಾಗುತ್ತಿದೆ. ಎರಡನೇ ಹಂತದ ಚಿತ್ರೀಕರಣಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಈ ಸೆಟ್‌ನಲ್ಲಿ‌ ಬರೋಬ್ಬರಿ 100 ದಿನ ಶೂಟಿಂಗ್ ನಡೆಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ. 

ADVERTISEMENT

ಧನಂಜಯ

‘ಈ ಸಿನಿಮಾ ಇಂದಿನ ಪೀಳಿಗೆಯನ್ನು ಬೆರಗುಗೊಳಿಸಲಿದ್ದು, ಹಿಂದಿನ ಪೀಳಿಗೆಗೆ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಲಿದೆ. ಹೊಸ ಜಗತ್ತನ್ನೇ ಈ ಸೆಟ್‌ನೊಳಗೆ ನಿರ್ಮಾಣ ಮಾಡಿದ್ದೇವೆ. ಸೆಟ್‌ನೊಳಗೆ ಏನಿದೆ ಎನ್ನುವುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಇದನ್ನು ಬೃಹತ್‌ ಪರದೆಯ ಮೇಲೆ ನೋಡಿಯೇ ಅನುಭವಿಸಬೇಕು. ಬಿಗ್‌ ಬಜೆಟ್‌ನಲ್ಲೇ ಈ ಸಿನಿಮಾ ನಿರ್ಮಾಣವಾಗುತ್ತಿದೆ’ ಎನ್ನುತ್ತಾರೆ ನಿರ್ಮಾಪಕ ವೈಶಾಖ್‌ ಜೆ. ಗೌಡ. 

ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಛಾಯಾಚಿತ್ರಗ್ರಹಣವಿದೆ. ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನದಲ್ಲಿ ಸೆಟ್‌ಗಳು ನಿರ್ಮಾಣವಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.