ADVERTISEMENT

'Peddi' Poster: ‘ಪೆದ್ದಿ’ಯಲ್ಲಿ ಹೀಗಿದ್ದಾರೆ ಶಿವಣ್ಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 23:30 IST
Last Updated 13 ಜುಲೈ 2025, 23:30 IST
ಶಿವರಾಜ್‌ಕುಮಾರ್‌
ಶಿವರಾಜ್‌ಕುಮಾರ್‌   

ರಾಮ್‌ ಚರಣ್‌ ನಟನೆಯ ‘ಪೆದ್ದಿ’ ಚಿತ್ರದಲ್ಲಿ ಗೌರ್ ನಾಯ್ಡು ಆಗಿ ಶಿವರಾಜ್‌ಕುಮಾರ್‌ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಪರಿಚಯಿಸುವ ಪೋಸ್ಟರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. 

ಬುಚ್ಚಿಬಾಬು ಸನಾ ನಿರ್ದೇಶನದ ಈ ಚಿತ್ರ ಕ್ರೀಡೆಯೊಂದಿಗೆ ಆ್ಯಕ್ಷನ್‌ ಡ್ರಾಮಾ ಕಥಾಹಂದರ ಹೊಂದಿದೆ. ರಾಮ್‌ ಚರಣ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿ ಬಾಬು ಮತ್ತು ದಿವೇಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಶಿವರಾಜ್‌ ಕುಮಾರ್‌ ಉಗ್ರ ನೋಟ, ದಪ್ಪ ಮೀಸೆಯೊಂದಿಗೆ ರಗಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಪವರ್‌ ಫುಲ್‌ ಪಾತ್ರ ಎಂದಿದೆ ಚಿತ್ರತಂಡ.

ADVERTISEMENT

ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬಂಡವಾಳ ಹೂಡಿದೆ. ಈ ಚಿತ್ರಕ್ಕೆ ಎ.ಆರ್‌.ರೆಹಮಾನ್ ಸಂಗೀತ ನೀಡುತ್ತಿದ್ದು, ಆರ್.ರತ್ನವೇಲು ಅವರು ಛಾಯಾಚಿತ್ರಗ್ರಹಣವಿದೆ. ಸದ್ಯ ಚಿತ್ರೀಕರಣ ಭರದಿಂದ ಸಾಗಿದ್ದು, ಮಾರ್ಚ್ 27, 2026ರಂದು ಹಲವು ಭಾಷೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.