ADVERTISEMENT

ಬೋಲ್ಡ್‌ ಪಾತ್ರ ಶ್ರದ್ಧಾಗೆ ಇಷ್ಟ

ಕೆ.ಎಂ.ಸಂತೋಷ್‌ ಕುಮಾರ್‌
Published 19 ಮಾರ್ಚ್ 2020, 19:30 IST
Last Updated 19 ಮಾರ್ಚ್ 2020, 19:30 IST
‘ಗೋದ್ರಾ’ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌
‘ಗೋದ್ರಾ’ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌   

‘ಕಾಶ್ಮೀರಿ’ ಚೆಲುವೆ ಶ್ರದ್ಧಾ ಶ್ರೀನಾಥ್‌ ಕನ್ನಡ, ತೆಲುಗು, ತಮಿಳು, ಮಲಯಾಳ ಹಾಗೂ ಹಿಂದಿಯಲ್ಲಿ ಮಿಂಚುತ್ತಿರುವ ನಟಿ. ಇವರು ನೀನಾಸಂ ಸತೀಶ್‌ ನಾಯಕನಾಗಿರುವ ‘ಗೋದ್ರಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಹಾಡೊಂದು ಮಾತ್ರ ಚಿತ್ರೀಕರಣಕ್ಕೆ ಬಾಕಿ ಇದೆ. ಇದರ ಬೆನ್ನಲ್ಲೇ ಕನ್ನಡದ ಎರಡು ದೊಡ್ಡ ಬ್ಯಾನರ್‌ನ ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಈ ಪಂಚಭಾಷಾ ತಾರೆಗೆ ಸಿಕ್ಕಿದೆ.

ರಿಷಬ್‌ ಶೆಟ್ಟಿ ಅವರ ‘ರುದ್ರಪ್ರಯಾಗ’ ಚಿತ್ರಕ್ಕೂಶ್ರದ್ಧಾ ನಾಯಕಿ. ಈ ಚಿತ್ರದ ಶೂಟಿಂಗ್‌ ಇನ್ನಷ್ಟೇ ಶುರುವಾಗಬೇಕಿದೆ.ಇವರು ತೆಲುಗಿನಲ್ಲಿ ನಾಯಕಿಯಾಗಿ ನಟಿಸಿರುವ ‘ಕೃಷ್ಣ & ಈಸ್‌ ಲೀಲಾ’ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ತಮಿಳಿನ ‘ಚಕ್ರ’ ಮತ್ತು ‘ಮಾರ’ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.ಅನೂಪ್‌ ಭಂಡಾರಿ ನಿರ್ದೇಶನ ಮತ್ತು ಸುದೀಪ್‌ ನಟನೆಯ ‘ಫ್ಯಾಂಟಮ್‌’ ಚಿತ್ರಕ್ಕೂ ನಾಯಕಿಯಾಗಿ ಶ್ರದ್ಧಾ ಹೆಸರು ಚಾಲ್ತಿಯಲ್ಲಿದೆ.

ಕನ್ನಡ ಚಿತ್ರರಂಗಕ್ಕೆ ‘ಯೂಟರ್ನ್‌’ ಸಿನಿಮಾ ಮೂಲಕ ಕಾಲಿಟ್ಟವರು ಶ್ರದ್ಧಾ ಶ್ರೀನಾಥ್‌. ಈ ಚಿತ್ರ ಅವರಿಗೆ ಚಿತ್ರರಂಗದಲ್ಲಿ ಹೊಸ ತಿರುವು ನೀಡಿತು. ಈ ಚಿತ್ರದ ನಟನೆಗಾಗಿಅತ್ತುತ್ತಮ ನಟಿ ಫಿಲ್ಮ್ ಫೇರ್‌ ಪ್ರಶಸ್ತಿ ಕೂಡ ಸಿಕ್ಕಿತು. ಈ ಚಿತ್ರ ಹಿಂದಿಯಲ್ಲೂ ‘ಜೆರ್ಸಿ’ ಹೆಸರಿನಲ್ಲಿ ತೆರೆಕಂಡಿತು. ನಂತರ ‘ಆಪರೇಷನ್‌ ಅಲಮೇಲಮ್ಮ’ ಕೂಡಅತ್ತುತ್ತಮ ನಟಿ ಫಿಲ್ಮ್ ಫೇರ್‌ (ಕ್ರಿಟಿಕ್‌) ಪ್ರಶಸ್ತಿತಂದುಕೊಟ್ಟಿತು. ಕಾಶ್ಮೀರದಲ್ಲಿ ಹುಟ್ಟಿದ ಈ ಚೆಲುವೆಸಹಜ ಅಭಿನಯದಿಂದಲೇ ಗುರುತಿಸಿಕೊಂಡವರು. ರೂಪದರ್ಶಿ ಮತ್ತು ವಕೀಲೆ ಕೂಡ ಹೌದು.

ADVERTISEMENT

ಸದ್ಯ ಕೊರೊನಾ ಕಾರಣಕ್ಕೆ ಚಿತ್ರಗಳ ಶೂಟಿಂಗ್‌ ಸ್ಥಗಿತಗೊಂಡಿರುವುದರಿಂದ ನಟನೆಯಿಂದ ಬಿಡುವು ಪಡೆದು ‘ಗೃಹಬಂಧನ’ದಲ್ಲಿರುವ ಶ್ರದ್ಧಾ ತಮ್ಮ ಸಿನಿ ಪಯಣದ ಬಗ್ಗೆ ‘ಸಿನಿಮಾ ಪುರವಣಿ’ ಜತೆಗೆ ಹಲವು ಮಾಹಿತಿ ಹಂಚಿಕೊಂಡರು.

‘ಗೋದ್ರಾ’ ಚಿತ್ರದತ್ತ ಗಮನ ಕೇಂದ್ರೀಕರಿಸಿ ಮಾತಿಗಿಳಿದ ಅವರು, ‘ಚಿತ್ರದ ಟೀಸರ್‌ಈಗಾಗಲೇ ಹೊರಬಂದಿದೆ. ನನ್ನ ಪಾತ್ರ ಏನಿರಬಹುದು ಎನ್ನುವುದನ್ನು ಪ್ರೇಕ್ಷಕರು ಟೀಸರ್‌ ನೋಡಿಯೇ ಊಹಿಸಬಹುದು. ನಾನು ಈ ಚಿತ್ರದಲ್ಲಿ ಎರಡು ಛಾಯೆಗಳಲ್ಲಿ ಕಾಣಿಸಿಕೊಂಡಿದ್ದೇನೆ. ಮೊದಲಾರ್ಧ ವಿದ್ಯಾರ್ಥಿನಿಯಾಗಿ ನಾಯಕನಿಗೆ ಬೆಂಬಲವಾಗಿ ನಿಲ್ಲುತ್ತಾ, ಕೊನೆಗೆ ಹೋರಾಟಗಾರನ ಮಡದಿಯಾಗಿ ಕಾಣಿಸಿಕೊಂಡಿದ್ದೇನೆ.ಭಾವನಾತ್ಮಕವಾಗಿಯೂ ನನ್ನ ಪಾತ್ರ ಗಮನ ಸೆಳೆಯುತ್ತದೆ. ಹಾಗಂತ ನಮ್ಮ ಸಿನಿಮಾ ಗೋದ್ರಾ ಘಟನೆಗೆ ಸಂಬಂಧಿಸಿದ್ದಲ್ಲ’ ಎಂದರು.

ಪಾತ್ರ ತಯಾರಿ ಬಗ್ಗೆ ಕೇಳಿದರೆ, ‘ನನ್ನ ಪ್ರಕಾರ ಎಲ್ಲ ಪಾತ್ರಗಳಿಗೂ ವಿಶೇಷ ತಯಾರಿ ಬೇಕಾಗುವುದಿಲ್ಲ. ನಾವು ನಿಭಾಯಿಸಬೇಕಾದ ಪಾತ್ರವನ್ನು ಅರ್ಥ ಮಾಡಿಕೊಳ್ಳಲು ನಿರಂತರವಾಗಿಸ್ಕ್ರಿಪ್ಟ್‌ ಓದುತ್ತಿರಬೇಕು. ನಾನು ಅದಷ್ಟೇ ಕೆಲಸ ಮಾಡಿದೆ, ಸಹಜವಾಗಿ ನಟಿಸಿದ್ದೇನೆ. ಚಿತ್ರೀಕರಣ ಕೂಡ ಚೆನ್ನಾಗಿ ನಡೆಯಿತು.ಸ್ಮರಣೀಯವಾಗಿತ್ತು. ಚಿತ್ರದ ನಿರ್ದೇಶಕ ನಂದೀಶ್‌ ಅವರು ಕಥೆ ಬಗ್ಗೆ ಹೇಳಿ, ಈ ಚಿತ್ರದಲ್ಲಿ ನೀನಾಸಂ ಸತೀಶ್‌ ನಟಿಸುತ್ತಿದ್ದಾರೆ ಎಂದರು. ಎರಡು ಬಾರಿ ಸ್ಕ್ರಿಪ್ಟ್‌ ಆಲಿಸಿ ಚಿತ್ರದಲ್ಲಿ ನಟಿಸಲು ಒಪ್ಪಿದೆ’ಎನ್ನಲು ಮರೆಯಲಿಲ್ಲ.

‘ವೃತ್ತಿ ಜೀವನದಲ್ಲಿ 2019 ನನ್ನ ಪಾಲಿಗೆ ಅತ್ಯುತ್ತಮವಾಗಿತ್ತು. ನಾನು ನಟಿಸಿದ ಚಿತ್ರಗಳು ಒಳ್ಳೆಯ ಯಶಸ್ಸು ತಂದುಕೊಟ್ಟವು. ಹಿಂದಿಯಲ್ಲೂರೆಕಗ್ನಿಷನ್‌ ಸಿಕ್ಕಿತು. ಹಿಂದಿನ ವರ್ಷ ಹಾಕಿದ ಶ್ರಮ ಈ ವರ್ಷದಲ್ಲೂ ಒಳ್ಳೆಯ ಆರಂಭ ಸಿಗುವಂತೆ ಮಾಡಿತು. ಮುಂದಿನ ಹಂತಕ್ಕೆ ಕೊಂಡೊಯ್ದಿದೆ’ ಎನ್ನುವ ಮಾತು ಸೇರಿಸಿದರು.

ಭವಿಷ್ಯದಲ್ಲಿ ನಟಿಸಲಿರುವ ಚಿತ್ರಗಳಲ್ಲಿ ಪಾತ್ರಗಳು ತುಂಬಾ ಸ್ಟ್ರಾಂಗ್‌ ಮತ್ತು ಬೋಲ್ಡ್‌ ಆಗಿರಬೇಕೆನ್ನುವುದು ಇವರ ಅಭಿಲಾಷೆ. ಕೆಲವು ನಟಿಯರುನಾಯಕಿ ಪ್ರಧಾನ ಚಿತ್ರಗಳತ್ತವೇ ಫೋಕಸ್‌ ಮಾಡುವಂತೆ ಶ್ರದ್ಧಾ ಅವರಿಗೆ ನಾಯಕಿಪ್ರಧಾನ ಚಿತ್ರಗಳ ಮೇಲೆ ಮೋಹವಿಲ್ಲ. ಆದರೆ, ಈಗ ಮಾಡಿರುವ ಪಾತ್ರಗಳಿಗಿಂತಲೂ ವಿಭಿನ್ನ ಪಾತ್ರಗಳು ಸಿಕ್ಕಿದರೆಪ್ರೇಕ್ಷಕರನ್ನು ಇನ್ನಷ್ಟು ರಂಜಿಸಬಹುದು, ಖುಷಿಪಡಿಸಬಹುದು ಅನ್ನುವುದು ಅವರ ಅನಿಸಿಕೆ.

‘ಕಥೆಗಳಲ್ಲಿ ನಾಯಕ ಮತ್ತು ನಾಯಕಿಗೆ ಸಮಾನ ಆದ್ಯತೆ ಇರಬೇಕು. ಚಿಕ್ಕ ಪಾತ್ರವಾದರೂ ಅದು ಪರಿಣಾಮ ಬೀರುವಂತಿರಬೇಕು. ನಾನು ನಟಿಸುವ ಸಿನಿಮಾಗಳು ವಾಸ್ತವ ಬದುಕಿಗೆ ಹತ್ತಿರವಾಗಿರಬೇಕು.ನಿಜ ಬದುಕಿನಲ್ಲಿ ಅನುಭವಿಸುವಂತೆ ಖುಷಿ ಅಥವಾ ದುಃಖವೇ ಆಗಿರಲಿ ವಾಸ್ತವ ಆಧರಿಸಿದ ಪಾತ್ರಗಳೆಂದರೆ ನನಗೆ ತುಂಬಾ ಇಷ್ಟ. ನಾನು ಅವಾಸ್ತವಿಕ ಪಾತ್ರಗಳನ್ನು ಮಾಡುವುದಿಲ್ಲ ಎನ್ನುವುದು ಪ್ರೇಕ್ಷಕರಿಗೂ ಗೊತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.