ADVERTISEMENT

ಅಮ್ಮನ ಸಿನಿ ಪಯಣವನ್ನು ಹಾಡಿನ ಮೂಲಕ ನೆನಪಿಸಿದ ಶ್ರುತಿ ಮಗಳು ಗೌರಿ: ವಿಡಿಯೊ ನೋಡಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 10:52 IST
Last Updated 23 ಸೆಪ್ಟೆಂಬರ್ 2025, 10:52 IST
<div class="paragraphs"><p>ಚಿತ್ರ ಕೃಪೆ:&nbsp;<strong><a href="https://www.instagram.com/shruthi__krishnaa/">shruthi__krishnaa</a></strong></p></div>

ಚಿತ್ರ ಕೃಪೆ: shruthi__krishnaa

   

ನಟಿ ಶ್ರುತಿ ಕೆಲವು ದಿನಗಳ ಹಿಂದೆ ಕಲಾವಿದರ, ಕುಟುಂಬಸ್ಥರ ಸಮ್ಮುಖದಲ್ಲಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಅವರ ಮಗಳು ಗೌರಿ ‘ಶೃತಿ‘ ಚಲನಚಿತ್ರದ ‘ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಎಂದೂ ಒಂದೇ ಸತ್ಯವೆ ಹೇಳುವೆ‘ ಎಂಬ ಹಾಡನ್ನು ಹಾಡಿದ್ದಾರೆ.

ADVERTISEMENT

ಈ ಬಗ್ಗೆ ಶ್ರುತಿ ಅವರ ಪುತ್ರಿ ಗೌರಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಗೌರಿ ಅವರು ಹಾಡಿರುವ ಹಾಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಶ್ರುತಿ ಅವರ ಹುಟ್ಟು ಹಬ್ಬದಲ್ಲಿ ಗೌರಿ ಅವರು ಹಸಿರು ಬಳೆ ತೊಟ್ಟು, ಬಿಳಿ ಲಂಗ ದಾವಣಿ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.