ADVERTISEMENT

ಟಾಪ್‌ಲೆಸ್‌ ಫೋಟೊ ಹಂಚಿಕೊಂಡ ನಟಿ ಶ್ರುತಿ ಹಾಸನ್‌

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 13:08 IST
Last Updated 7 ಅಕ್ಟೋಬರ್ 2021, 13:08 IST
ಶ್ರುತಿ ಹಾಸನ್‌
ಶ್ರುತಿ ಹಾಸನ್‌   

ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್‌ಫೋಟೊಶೂಟ್‌ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಅವರ ಬ್ಲ್ಯಾಕ್‌ ಆಂಡ್‌ ವೈಟ್‌ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಶ್ರುತಿ ಹಾಸನ್‌ ಇತ್ತೀಚೆಗೆ ಫೋಟೊಶೂಟ್‌ ಮಾಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಟಾಪ್‌ಲೆಸ್‌ ಆಗಿರುವಬ್ಲ್ಯಾಕ್‌ ಆಂಡ್‌ ವೈಟ್‌ ಫೋಟೊ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಟಾಪ್‌ಲೆಸ್‌ ಫೋಟೊವನ್ನು ಪೋಸ್ಟ್‌ ಮಾಡಿರುವ ಶ್ರುತಿ ಹಾಸನ್‌'ನನ್ನ ಹೆಸರನ್ನು ಜೋರಾಗಿಹೇಳಿ' ಎಂದು ಅವರು ಬರೆದುಕೊಂಡಿದ್ದಾರೆ.

ADVERTISEMENT

ಕೆಲವು ದಿನಗಳ ಹಿಂದಷ್ಟೆ ಗೆಳೆಯನ ಜೊತೆ ವರ್ಕೌಟ್‌ ಮಾಡುವ ವಿಡಿಯೊವನ್ನು ಹಂಚಿಕೊಂಡಿದ್ದರು. ಈ ವಿಡಿಯೊ ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಯಾಗಿದ್ದರು.

ಸದ್ಯ ಶ್ರುತಿ ಹಾಸನ್‌ ವಿಜಯ್‌ ಸೇತುಪತಿ ನಾಯಕರಾಗಿ ನಟಿಸುತ್ತಿರುವ ’ಲಬಾಮ್‌’ ಹಾಗೂ ಪ್ರಭಾಸ್‌ ನಟಿಸುತ್ತಿರುವ ’ಸಲಾರ್‌’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.