ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದ ‘ಸಿಕಂದರ್’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಇದಕ್ಕೆ ನಾಯಕ ಹೊಣೆಯಲ್ಲ, ನಿರ್ದೇಶಕ ಎ.ಆರ್. ಮುರುಗದಾಸ್ ಹೊಣೆ ಎಂದಿದ್ದಾರೆ ನಟ ನವಾಜುದ್ದೀನ್ ಸಿದ್ದಿಕಿ.
‘ನಿರ್ದೇಶಕರು ಉತ್ತಮ ಸ್ಕ್ರಿಪ್ಟ್ ಜತೆಗೆ ಕಷ್ಟಪಟ್ಟು ಕೆಲಸ ಮಾಡಬೇಕು. ಸಲ್ಮಾನ್ ಖಾನ್‌ರಂಥ ನಟರ ಸಿನಿಮಾ ಗೆಲ್ಲಲು ಬೇಕಾದ ಎಲ್ಲ ಅಂಶಗಳನ್ನು ಸೇರಿಸಬೇಕು’ ಎಂದಿದ್ದಾರೆ ಸಿದ್ದಿಕಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.