ADVERTISEMENT

ತಮಿಳು ನಟ ಸಿಂಬುಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 13:18 IST
Last Updated 11 ಡಿಸೆಂಬರ್ 2021, 13:18 IST
ನಟ ಸಿಂಬು
ನಟ ಸಿಂಬು   

ಚೆನ್ನೈ: ತಮಿಳು ನಟ ಸಿಂಬು ಅನಾರೋಗ್ಯದಿಂದ ಇಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಅವರಿಗೆ ವೈರಸ್‌ ಸೋಂಕು ತಗುಲಿದೆ ಎಂದು ವೈದ್ಯರು ಹೇಳಿದ್ದಾರೆ. ಆದಾಗ್ಯೂ ಅವರಿಗೆ ಕೋವಿಡ್‌ ಸೋಂಕು ತಗುಲಿಲ್ಲ ಎಂದುದೃಢಪಡಿಸಿದ್ದಾರೆ.

ಸಿಂಬು ಅವರ ಮ್ಯಾನೇಜರ್‌ ಕೂಡ ಕೋವಿಡ್‌ ಸೋಂಕು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಆತಂಕಪಡುವ ಅಗತ್ಯ ಇಲ್ಲ, ಎರಡು ದಿನಗಳಲ್ಲಿ ಅವರು ಗುಣಮುಖರಾಗಲಿದ್ದಾರೆ ಎಂದು ಶಿಂಬು ಆಪ್ತರು ತಿಳಿಸಿದ್ದಾರೆ.

ಸಿಂಬು ನಟಿಸಿದ್ದ ಈಶ್ವರನ್‌ ಹಾಗೂ ಮಾನಾಡು ಸಿನಿಮಾಗಳು ಇತ್ತೀಚೆಗೆ ಬಿಡುಗಡೆಯಾದ ಸಿನಿಮಾಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.