ನಟ ಅಮೀರ್ ಖಾನ್
(ಪಿಟಿಐ ಚಿತ್ರ)
ಅಮೀರ್ ಖಾನ್ ಅವರ ಮುಂಬರುವ ಚಿತ್ರ ‘ಸಿತಾರೆ ಜಮೀನ್ ಪರ್’ ಮುಂದಿನ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಆರ್‌ಎಸ್ ಪ್ರಸನ್ನ ನಿರ್ದೇಶಿಸಿದ 2007 ರ ಬ್ಲಾಕ್‌ಬಸ್ಟರ್ ‘ತಾರೆ ಜಮೀನ್ ಪರ್’ನ ಸೀಕ್ವೆಲ್ ಇದಾಗಿದೆ. ಪಿಂಕ್ ವಿಲ್ಲಾ ವರದಿಯ ಪ್ರಕಾರ, ಅಮೀರ್ ಖಾನ್ ಈ ಬಹು ನಿರೀಕ್ಷಿತ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈಗ ಪೋಸ್ಟ್-ಪ್ರೊಡಕ್ಷನ್‌ಗೆ ಹೋಗಲಿದ್ದು ಚಲನಚಿತ್ರವು 2025 ರಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಅಮೀರ್ ಖಾನ್, ಜೆನಿಲಿಯಾ ದೇಶ್‌ಮುಖ್, ದರ್ಶೀಲ್ ಸಫಾರಿ ಮತ್ತಿತರು ತಾರಾಗಣದಲ್ಲಿದ್ದಾರೆ ಎಂದು ಎನ್‌ಡಿಟಿವಿ ವರದಿಮಾಡಿದೆ.
ಡಿಸೆಂಬರ್ 15 ರಂದು ಮುಂಬೈನ ಫಿಲ್ಮ್ ಸಿಟಿಯಲ್ಲಿ ಚಿತ್ರದ ಅಂತಿಮ ಹಂತದ ಚಿತ್ರೀಕರಣ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಿ ತಡರಾತ್ರಿಯವರೆಗೆ ನಡೆದ ಶ್ಯೂಟಿಂಗ್‌ನಲ್ಲಿ ಅಮೀರ್ ಕೂಡ ಹಾಜರಿದ್ದರು ಎಂದು ವರದಿಯಾಗಿದೆ.
ಚಲನಚಿತ್ರವು ಫೆಬ್ರವರಿಯಲ್ಲಿ ತೆರೆಗೆ ಬರಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.