ADVERTISEMENT

‘ಸ್ಲಂ ಡಾಗ್‌’ನಲ್ಲಿ ವಿಜಯ್‌ ಸೇತುಪತಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 23:20 IST
Last Updated 16 ಜನವರಿ 2026, 23:20 IST
ವಿಜಯ್‌ ಸೇತುಪತಿ
ವಿಜಯ್‌ ಸೇತುಪತಿ   

ಪುರಿ ಜಗನ್ನಾಥ್‌–ವಿಜಯ್‌ ಸೇತುಪತಿ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಚಿತ್ರೀಕರಣ ಕೂಡ ಪೂರ್ಣಗೊಂಡಿದ್ದು, ಚಿತ್ರಕ್ಕೆ ‘ಸ್ಲಂ ಡಾಗ್‌’ ಎಂದು ಹೆಸರಿಡಲಾಗಿದೆ. ಚಿತ್ರತಂಡ ಶೀರ್ಷಿಕೆ ಜತೆಗೆ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಗೊಳಿಸಿದೆ. 

ಕೈಯಲ್ಲಿ ರಕ್ತಸಿಕ್ತ ಮಚ್ಚು ಹಿಡಿದ ವಿಜಯ್‌ ಸೇತುಪತಿ ಉಗ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್‌ ಆ್ಯಕ್ಷನ್  ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಸಂಯುಕ್ತ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಟಬು, ಬ್ರಹ್ಮಾನಂದ ಹಾಗೂ ವಿಟಿವಿ ಗಣೇಶ್ ಕೂಡ ತಾರಾಬಳಗದಲ್ಲಿದ್ದಾರೆ.

ಪುರಿ ಜಗನ್ನಾಥ್ ಅವರು ತಮ್ಮದೇ ಪುರಿ ಕನೆಕ್ಟ್ಸ್‌ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಸಂಗೀತವಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.