ADVERTISEMENT

ಭಿನ್ನ ಪ್ರಯೋಗದ ಚಿತ್ರ ‘ರಾಘು’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 19:30 IST
Last Updated 20 ಏಪ್ರಿಲ್ 2023, 19:30 IST
ವಿಜಯ ರಾಘವೇಂದ್ರ 
ವಿಜಯ ರಾಘವೇಂದ್ರ    

ಚಂದನವನದಲ್ಲೀಗ ಪ್ಯಾನ್‌ ಇಂಡಿಯಾ ಸಿನಿಮಾಗಳ ಜೊತೆ ಜೊತೆಗೇ ಪ್ರಯೋಗಾತ್ಮಕ ಚಿತ್ರಗಳೂ ವೀಕ್ಷಕರನ್ನು ಸೆಳೆಯುತ್ತಿವೆ. ಈ ಸಾಲಿಗೆ ಒಂದಿಷ್ಟು ಕೌತುಕಗಳನ್ನು ಇಟ್ಟುಕೊಂಡು ಬರುತ್ತಿದೆ ‘ರಾಘು’ ಸಿನಿಮಾ. ನಟ ವಿಜಯ ರಾಘವೇಂದ್ರ ಅವರೊಬ್ಬರೇ ನಟಿಸಿರುವ ‘ರಾಘು’ ಏಪ್ರಿಲ್‌ 28ರಂದು ತೆರೆಕಾಣುತ್ತಿದೆ.

ನಿರ್ದೇಶಕ ಎಂ. ಆನಂದ್ ರಾಜ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಥ್ರಿಲ್ ನೀಡುವ ಈ ಸಿನಿಮಾ ಪೂರ್ತಿ ವಿಜಯ್ ರಾಘವೇಂದ್ರ ಒಬ್ಬರೇ ಇರಲಿದ್ದಾರೆ ಎಂದಿದೆ ಚಿತ್ರತಂಡ. ಇದು ಸೋಲೊ ಆ್ಯಕ್ಟಿಂಗ್‌ ಸಿನಿಮಾ. ಸಿನಿಮಾಗೆ ನಟ ಶಿವರಾಜ್‌ಕುಮಾರ್‌ ಸಾಥ್‌ ನೀಡಿದ್ದು, ‘ರಾಘು’ ಟ್ರೈಲರ್‌ಗೆ ಹ್ಯಾಟ್ರಿಕ್‌ ಹೀರೊ ಧ್ವನಿ ನೀಡಿದ್ದಾರೆ. ಶಿವರಾಜ್‌ಕುಮಾರ್‌ ಅವರ ಧ್ವನಿ, ವಿಜಯ್ ರಾಘವೇಂದ್ರ ನಟನೆ, ಉದಯ್ ಲೀಲಾ ಛಾಯಾಗ್ರಹಣ, ಸೂರಜ್ ಜೋಯಿಸ್ ಟ್ರೈಲರ್‌ ಮೂಲಕವೇ ವೀಕ್ಷಕರನ್ನು ಸೆಳೆದಿದೆ.

‘ಹಲವು ಕಲಾವಿದರನ್ನು ಹಾಕಿಕೊಂಡು ಸಿನಿಮಾ ಮಾಡಿದಾಗ ನಿರ್ಮಾಪಕರು ಸಿಗುವುದು ಕಷ್ಟ. ಇನ್ನು ಸೋಲೊ ಆ್ಯಕ್ಟರ್‌ ಇಟ್ಟುಕೊಂಡು ಕಥೆ ಹೆಣೆದು ಸಿನಿಮಾ ಮಾಡುವುದು ಕಷ್ಟವೇ. ಇದು ಸಂಪೂರ್ಣ ತಂತ್ರಜ್ಞರ ಸಿನಿಮಾ. ನಟನಾಗಿ ವಿಜಯ ರಾಘವೇಂದ್ರ ಅವರೊಬ್ಬರೇ ಇದ್ದರೂ, ಹಾಡುಗಳು, ಫೈಟ್ಸ್, ಕಥೆಯಲ್ಲಿ ತಿರುವು ಎಲ್ಲವೂ ಇದೆ’ ಎನ್ನುತ್ತಾರೆ ಆನಂದ್‌ ರಾಜ್‌.

ADVERTISEMENT

ಡಿಕೆಎಸ್ ಸ್ಟುಡಿಯೊ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್‌ನಡಿ ‘ರಾಘು’ ಸಿನಿಮಾವನ್ನು ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ ಕೋಟ ನಿರ್ಮಾಣ ಮಾಡಿದ್ದಾರೆ. ಚಿತ್ರದ ಎರಡು ಹಾಡುಗಳಿಗೆ ವಾಸುಕಿ ವೈಭವ್ ಹಾಗೂ all ok ಧ್ವನಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.