ADVERTISEMENT

‌ಇಂಡಿಗೊ ಏರ್‌ಲೈನ್ಸ್‌ ವಿರುದ್ಧ ಸೋನಾಕ್ಷಿ ಗರಂ: ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 9:45 IST
Last Updated 4 ನವೆಂಬರ್ 2019, 9:45 IST
   

ಮುಂಬೈ: ತಮ್ಮಸೂಟ್‌ಕೇಸ್‌ ಹ್ಯಾಂಡಲ್‌ ಮುರಿದಿರುವುದಕ್ಕೆ ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಇಂಡಿಗೊ ಏರ್‌ಲೈನ್ಸ್‌ ವಿರುದ್ಧ ಗರಂ ಆಗಿದ್ದಾರೆ.

ಈ ಕುರಿತು ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

‘ಸೂಟ್‌ಕೇಸ್‌ನ ಎರಡು ಹ್ಯಾಂಡಲ್‌ಗಳು ಸಂಪೂರ್ಣವಾಗಿ ಮುರಿದುಹೋಗಿವೆ. ಜತೆಗೆ, ಒಂದು ಚಕ್ರವು ಹೊರಬಂದಿದೆ. ಇಂಡಿಯೊಸಿಬ್ಬಂದಿಗೆ ಧನ್ಯವಾದಗಳು. ಇದರಿಂದ ಸಾರ್ವಜನಿಕರಿಗೆ ತೊಂದರೆ ತಪ್ಪಿದಲ್ಲ’ಎಂದು ಅಸಮಾಧಾನ ಹೊರಹಾಕಿದ್ದಾರೆ.

ADVERTISEMENT

ಘಟನೆ ಸಂಬಂಧ ರೀ ಟ್ವೀಟ್‌ ಮಾಡಿರುವ ಇಂಡಿಗೊ, ‘ಸೋನಾಕ್ಷಿ ಅವರೇ ನಿಮ್ಮ ಬ್ಯಾಗ್‌ ಹಾನಿಯಾಗಿರುವುದಕ್ಕೆ ಕ್ಷಮೆಯಾಚಿಸುತ್ತೇವೆ. ನಿಮ್ಮನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತೇವೆ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.