ADVERTISEMENT

ಲಂಡನ್‌ನಲ್ಲಿ ಉಬರ್‌ ಟ್ಯಾಕ್ಸಿ ಚಾಲಕನಿಂದ ನನಗೆ ಕೆಟ್ಟ ಅನುಭವ: ಸೋನಂ ಕಪೂರ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 12:12 IST
Last Updated 16 ಜನವರಿ 2020, 12:12 IST
ಸೋನಂ ಕಪೂರ್‌
ಸೋನಂ ಕಪೂರ್‌   

ಮುಂಬೈ:ಲಂಡನ್‌ನ ಉಬರ್‌ ಟ್ಯಾಕ್ಸಿ ಚಾಲಕನಿಂದ ನನಗೆ ಕೆಟ್ಟ ಅನುಭವವಾಯಿತು ಎಂದುಬಾಲಿವುಡ್‌ ನಟಿ ಸೋನಂ ಕಪೂರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಲಂಡನ್‌ನಲ್ಲಿ ಉಬರ್ ಟ್ಯಾಕ್ಸಿ ಸೇವೆ ಬಳಕೆ ಮಾಡಿದಾಗ ಭಯಾನಕ ಅನುಭವವಾಯಿತು ಎಂದು ಅವರು ಬರೆದುಕೊಂಡಿದ್ದಾರೆ. ಚಾಲಕನ ವರ್ತನೆ ಬೇಸರ ತರಿಸಿತು, ಜೊತೆಗೆ ಜೋರಾಗಿ ಕಿರುಚಾಡುತ್ತಿದ್ದ ಎಂದು ಸೋನಂ ಕಪೂರ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಲಂಡನ್‌ನಲ್ಲಿ ಉಬರ್‌ ಟ್ಯಾಕ್ಸಿ ಸೇವೆ ಬಳಸಿದಾಗ ನನಗೆ ಕೆಟ್ಟ ಅನುಭವವಾಯಿತು. ದಯವಿಟ್ಟು, ಜಾಗೃತರಾಗಿರಿ, ಸ್ಥಳೀಯ ಸಾರ್ವಜನಿಕ ಸಾರಿಗೆ ಅಥವಾ ಕ್ಯಾಬ್‌ ಸೇವೆ ಬಳಸುವುದೇ ಉತ್ತಮ. ನಾನಂತೂ ಸಿಕ್ಕಾಪಟ್ಟೆ ಭಯಗೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಉಬರ್‌ ಸಂಸ್ಥೆ, ನಡೆದ ಘಟನೆಯ ಬಗ್ಗೆ ಮಾಹಿತಿ ನೀಡುವಂತೆ ಸೋನಂ ಕಪೂರ್‌ ಅವರಲ್ಲಿ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.