ADVERTISEMENT

ಸೋನಿ ಲಿವ್‌ನ ಹೊಸ ವೆಬ್‌ ಸಿರೀಸ್‌ನಲ್ಲಿ ’ಸೇತುರಾಜನ್ ಐಪಿಎಸ್’ ಆಗಿ ನಟ ಪ್ರಭುದೇವ

ಪಿಟಿಐ
Published 12 ಸೆಪ್ಟೆಂಬರ್ 2025, 6:58 IST
Last Updated 12 ಸೆಪ್ಟೆಂಬರ್ 2025, 6:58 IST
<div class="paragraphs"><p>’ಸೇತುರಾಜನ್ ಐಪಿಎಸ್’ ಆಗಿ ನಟ ಪ್ರಭುದೇವ</p></div>

’ಸೇತುರಾಜನ್ ಐಪಿಎಸ್’ ಆಗಿ ನಟ ಪ್ರಭುದೇವ

   

ಚೆನ್ನೈ: ಸೋನಿ ಲಿವ್‌ನ ಒರಿಜಿನಲ್ ವೆಬ್ ಸಿರೀಸ್‌ನ ಭಾಗವಾಗಿ ತಮಿಳಿನಲ್ಲಿ ’ಸೇತುರಾಜನ್ ಐಪಿಎಸ್’ ನಿರ್ಮಾಣವಾಗುತ್ತಿದ್ದು ಇದರಲ್ಲಿ ನಟ ಪ್ರಭುದೇವ ಅವರು ಸೇತುರಾಜನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ.

ಈ ಮೊದಲು ಪ್ರಭುದೇವ ಅವರು ಹಲವು ಚಿತ್ರಗಳಲ್ಲಿ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.

ADVERTISEMENT

Rathasaatchi ಎಂಬ 2022ರ ಪೊಲಿಟಿಕಲ್ ಕ್ರೈಂ ಡ್ರಾಮಾ ನಿರ್ದೇಶಿಸಿದ್ದ ರಫಿಕ್ ಇಸ್ಮಾಯಿಲ್ ಅವರು ಸೇತುರಾಜನ್ ಐಪಿಎಸ್ ನಿರ್ದೇಶನ ಮಾಡುತ್ತಿದ್ದಾರೆ.

ಸೇತುರಾಜನ್ ಐಪಿಎಸ್ ಸಿನಿಮಾ ತಮಿಳುನಾಡಿನ ಹಳ್ಳಿಯೊಂದರಲ್ಲಿ ನಡೆಯುವ ಕೊಲೆ ಘಟನೆಗಳು ರಾಜಕೀಯ ತಿರುವು ಪಡೆದುಕೊಂಡು ಏನೆಲ್ಲಾ ಘಟಿಸುತ್ತದೆ ಎಂಬ ಕಥಾ ಹಂದರವನ್ನು ಹೊಂದಿದೆ.

ಸೇತುರಾಜನ್ ಪಾತ್ರ ನನಗೆ ತೀವ್ರ ಕುತೂಹಲ ಮೂಡಿಸಿದೆ. ಈ ಬಗೆಯ ಪಾತ್ರ ನಾನು ಹಿಂದೆಂದೂ ಮಾಡಿಲ್ಲ ಎಂದು ಪ್ರಭುದೇವ ಅವರು ಚೆನ್ನೈನಲ್ಲಿ ನಡೆದ ಚಿತ್ರದ ಇವೆಂಟ್‌ನಲ್ಲಿ ಮಾತನಾಡಿದ್ದಾರೆ.

ಜನಪ್ರಿಯ ಒಟಿಟಿ ಆಗಿರುವ ಸೋನಿ ಲಿವ್‌ನಲ್ಲಿ ಸೇತುರಾಜನ್ ಐಪಿಎಸ್ ವೆಬ್ ಸಿರೀಸ್‌ ಶೀಘ್ರದಲ್ಲೇ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.