ADVERTISEMENT

ಹುಟ್ಟುಹಬ್ಬದ ದಿನವೇ ಪಿತೃ ವಿಯೋಗ: ದುಃಖದ ಮಡುವಿನಲ್ಲಿ ನಟ ಧ್ಯಾನ್ ಶ್ರೀನಿವಾಸನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2025, 12:33 IST
Last Updated 20 ಡಿಸೆಂಬರ್ 2025, 12:33 IST
<div class="paragraphs"><p>ಶ್ರೀನಿವಾಸನ್ ಮತ್ತು ಅವರ ಮಗ ಧ್ಯಾನ್</p></div>

ಶ್ರೀನಿವಾಸನ್ ಮತ್ತು ಅವರ ಮಗ ಧ್ಯಾನ್

   

ತಿರುವಂತಪುರ: ಇಂದು ಹುಟ್ಟುಹಬ್ಬದ ಸಂಭ್ರದಲ್ಲಿದ್ದ ಮಲಯಾಳ ನಟ, ನಿರ್ದೇಶಕ ಧ್ಯಾನ್‌ ಶ್ರೀನಿವಾಸನ್ ಅವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಧ್ಯಾನ್ ಅವರ ತಂದೆ, ಮಲಯಾಳದ ಪ್ರಸಿದ್ಧ ನಟ, ನಿರ್ಮಾಪಕ, ಬರಹಗಾರ ಶ್ರೀನಿವಾಸನ್ ಅವರು ನಿಧನರಾಗಿದ್ದಾರೆ.

ತಂದೆಯಂತೆ ಧ್ಯಾನ್‌ ಅವರು ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಮಲಯಾಳ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2013ರಲ್ಲಿ ‘ತಿರ’ ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದ ಧ್ಯಾನ್‌, 2019ರಲ್ಲಿ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಧ್ಯಾನ್‌ ಅವರು ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ADVERTISEMENT

ಕಿರಿಯ ಮಗ ಧ್ಯಾನ್‌ ಅವರೊಂದಿಗೆ ಶ್ರೀನಿವಾಸ್‌ ವಿಶೇಷ ಬಾಂಧ್ಯವನ್ನು ಹೊಂದಿದ್ದರು. ಕೊಚ್ಚಿಯಲ್ಲಿ ಮಗನ ಕುಟುಂಬದೊಂದಿಗೆ ಶ್ರೀನಿವಾಸನ್‌ ನೆಲೆಸಿದ್ದರು.

ಶ್ರೀನಿವಾಸನ್‌ ಅವರ ಹಿರಿಯ ಮಗ ವಿನೀತ್ ಶ್ರೀನಿವಾಸನ್‌ ಕೂಡ ಜನಪ್ರಿಯ ನಿರ್ದೇಶಕರಾಗಿದ್ದಾರೆ. ಧ್ಯಾನ್‌ ಅವರ ಮೊದಲ ಚಿತ್ರ ‘ತಿರಾ’ಕ್ಕೆ ವಿನೀತ್ ಅವರೇ ಆ್ಯಕ್ಷನ್ ಕಟ್‌ ಹೇಳಿದ್ದರು.

ಇಹಲೋಕಕ್ಕೆ ಶ್ರೀನಿವಾಸನ್‌:

ತೀವ್ರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀನಿವಾಸನ್‌ ಅವರು ಎರ್ನಾಕುಲಂನ ತಾಲ್ಲೂಕು ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳಿದ್ದಾರೆ.

1977ರಲ್ಲಿ ಪಿ.ಎ. ಬ್ಯಾಕರ್ ನಿರ್ದೇಶನದ ಮಣಿಮುಳಕ್ಕಂ ಚಿತ್ರದ ಮೂಲಕ ಶ್ರೀನಿವಾಸನ್ ಮಲಯಾಳ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಸಿನಿಮಾ ಶ್ರೀನಿವಾಸನ್‌ಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.

1984ರಲ್ಲಿ ‘ಒಡರುತ್ತು ಅಮ್ಮಾವ ಆಲಾರಿಯಂ’ ಚಿತ್ರದ ಮೂಲಕ ಉತ್ತಮ ಬರಹಗಾರರಾಗಿ ಶ್ರೀನಿವಾಸನ್‌ ಗುರುತಿಸಿಕೊಂಡಿದ್ದರು.

ಶ್ರೀನಿವಾಸನ್ ಅವರು ತೀಕ್ಷ್ಣವಾದ ಸಾಮಾಜಿಕ ವ್ಯಾಖ್ಯಾನವನ್ನು ಸುಲಭವಾಗಿ ಅರ್ಥೈಸಬಹುದಾದ ನಿಟ್ಟಿನಲ್ಲಿ ಹಾಸ್ಯಮಯವಾಗಿ ಕಥೆಗಳನ್ನು ಹೆಣೆಯುವ ಮೂಲಕ ಮಲಯಾಳ ಚಿತ್ರರಂಗದಲ್ಲಿ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.