‘ಬಘೀರ’ ನಂತರ ನಟ ಶ್ರೀಮುರಳಿ ಯಾವ ಸಿನಿಮಾ ಮಾಡುತ್ತಾರೆಂಬ ಕುತೂಹಲವಿತ್ತು. ಇದೀಗ ಅದಕ್ಕೆ ತೆರೆ ಬಿದ್ದಿದ್ದು ಐತಿಹಾಸಿಕ ಚಿತ್ರವೊಂದರಲ್ಲಿ ಅವರು ಬಣ್ಣ ಹಚ್ಚಲಿದ್ದಾರೆ. 500 ವರ್ಷಗಳ ಹಿಂದಿನ ಕಥೆಗೆ ಪುನೀತ್ ರುದ್ರನಾಗ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಪುನೀತ್ ರುದ್ರನಾಗ್ ಈಗಾಗಲೇ ನಟನಾಗಿ ಗುರುತಿಸಿಕೊಂಡಿದ್ದಾರೆ. ‘ಕೆಜಿಫ್ ಚಾಪ್ಟರ್ 1’, ‘ಎಕ್ಕ’, ‘ವೀರ ಚಂದ್ರಹಾಸ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀಮುರುಳಿ ಸ್ನೇಹಿತನಾಗಿರುವ ಪುನೀತ್‌ಗಿದು ನಿರ್ದೇಶಕನಾಗಿ ಚೊಚ್ಚಲ ಸಿನಿಮಾ. ಸುರಮ್ ಮೂವೀಸ್ ಮೂಲಕ ಜಯರಾಮ್ ದೇವಸಮುದ್ರ ಬೃಹತ್ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
‘ಐತಿಹಾಸಿಕ ಕಥೆ ಹೊಂದಿರುವ ಸಾಹಸಮಯ ಚಿತ್ರ. ಇತಿಹಾಸದ ಗತವೈಭವ ಸಾರುವ ಕಥೆ. ಈಗಾಗಲೇ ಈ ಕಥೆಯ ವಿಚಾರವಾಗಿ ಬಹಳಷ್ಟು ಕೆಲಸಗಳು ನಡೆಯುತ್ತಿದ್ದು, ಚಿತ್ರ ಪ್ರೀಪ್ರೊಡಕ್ಷನ್ ಹಂತದಲ್ಲಿದೆ. ಹಲವು ಕಾಲಘಟ್ಟಗಳಲ್ಲಿ ಕಥೆ ಸಾಗಲಿದೆ. ನವೆಂಬರ್‌ನಲ್ಲಿ ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ’ ಎಂದು ನಿರ್ದೇಶಕ ತಿಳಿಸಿದ್ದಾರೆ.
ಮೈಸೂರಿನ ಸಂಕೇತ್ ಈ ಚಿತ್ರಕ್ಕೆ ಛಾಯಾಚಿತ್ರಗ್ರಾಹಕರಾಗಿ ಕೆಲಸ ಮಾಡಲಿದ್ದು, ವಿಜಯ್ ರಾಜ್ ಸಂಕಲನ, ಅಮರ್ ಕಲಾ ನಿರ್ದೇಶನವಿದೆ. ಸಂಗೀತ ನಿರ್ದೇಶಕರು ಇನ್ನಷ್ಟೇ ಆಯ್ಕೆಯಾಗಬೇಕಿದೆ ಎಂದಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.