ADVERTISEMENT

ಮೆರಿ ಕ್ರಿಸ್ಮಸ್‌: ಥ್ರಿಲ್ಲರ್‌ ಚಿತ್ರದಲ್ಲಿ ವಿಜಯ್‌ ಸೇತುಪತಿ, ಕತ್ರಿನಾ ಕೈಫ್‌

ಐಎಎನ್ಎಸ್
Published 25 ಡಿಸೆಂಬರ್ 2021, 8:27 IST
Last Updated 25 ಡಿಸೆಂಬರ್ 2021, 8:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ತಮಿಳು ನಟ ವಿಜಯ್‌ ಸೇತುಪತಿ ಮತ್ತು ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಜೋಡಿ ಥ್ರಿಲ್ಲರ್‌ ಸಿನಿಮಾ 'ಮೆರಿ ಕ್ರಿಸ್ಮಸ್‌'ನಲ್ಲಿ ಜೊತೆಯಾಗಲಿದ್ದಾರೆ. ಶ್ರೀರಾಮ್‌ ರಾಘವನ್‌ ನಿರ್ದೇಶನದಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ.

'ಮೆರಿ ಕ್ರಿಸ್ಮಸ್‌' ಚಿತ್ರದ ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಭಾರತದ ಹೆಸರಾಂತ ನಟ ವಿಜಯ್‌ ಸೇತುಪತಿ ಮತ್ತು ಕತ್ರಿನಾ ಕೈಫ್‌ ಜೊತೆಯಾಗಿ ನಟಿಸುತ್ತಿರುವ ಬಗ್ಗೆ ಚಿತ್ರ ವಿಮರ್ಶಕ ತರಣ್‌ ಆದರ್ಶ್‌ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

'ಇದು ಅಧಿಕೃತ. ಶ್ರೀರಾಮ್‌ ರಾಘವನ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಮೆರಿ ಕ್ರಿಸ್ಮಸ್‌' ಚಿತ್ರದಲ್ಲಿ ಕತ್ರಿನಾ ಕೈಫ್‌ ಮತ್ತು ವಿಜಯ್‌ ಸೇತುಪತಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಇವರಿಬ್ಬರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀರಾಮ್‌ ಅವರು ಮುಂಬೈನಲ್ಲಿ ಥ್ರಿಲ್ಲರ್‌ ಸಿನಿಮಾ ನಿರ್ಮಾಣದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ' ಎಂದು ತರಣ್‌ ಆದರ್ಶ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ.

ADVERTISEMENT

ಚಿತ್ರತಂಡವು 2022ರ ಡಿಸೆಂಬರ್‌ 23ರಂದು, ಕ್ರಿಸ್ಮಸ್‌ ವಾರಂತ್ಯಕ್ಕೆ, 'ಮೆರಿ ಕ್ರಿಸ್ಮಸ್‌' ಚಿತ್ರವನ್ನು ಬಿಡುಗಡೆಗೊಳಿಸುವ ಗುರಿ ಹೊಂದಿದೆ. ರಮೇಶ್‌ ತೌರಾನಿ ಮತ್ತು ಸಂಜಯ್‌ ರೌತ್‌ರೇ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

'ಅಂಧಾಧುನ್‌' ಸಿನಿಮಾ ನಿರ್ದೇಶನದ ಮೂಲಕ ಶ್ರೀರಾಮ್‌ ರಾಘವನ್‌ ಹೆಚ್ಚು ಪ್ರಸಿದ್ಧಿಗೆ ಬಂದಿದ್ದಾರೆ. ಈ ಚಿತ್ರದಲ್ಲಿ ಆಯುಷ್ಮಾನ್‌ ಖುರಾನ, ತಬು ಮತ್ತು ರಾಧಿಕಾ ಆಪ್ಟೆ ನಟಿಸಿದ್ದಾರೆ.

ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಹೆಸರಾಂತ ನಟರಾಗಿರುವ ವಿಜಯ್‌ ಸೇತುಪತಿ ಈಗಾಗಲೇ 'ಮುಂಬೈಕರ್‌' ಚಿತ್ರದ ಮೂಲಕ ಬಾಲಿವುಡ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಮುಂಬೈಕರ್‌ ಚಿತ್ರವು ತಮಿಳಿನ ಸೂಪರ್‌ಹಿಟ್‌ ಚಿತ್ರ 'ಮಾನಗರಂ'ನ ರೀಮೇಕ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.