ADVERTISEMENT

Sandalwood: ‘ಸ್ಟಾರ್’ ಚಿತ್ರದ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 23:30 IST
Last Updated 8 ಫೆಬ್ರುವರಿ 2026, 23:30 IST
ರಜತ ರಕ್ಷಾ
ರಜತ ರಕ್ಷಾ   

ಬಹುತೇಕ ಹೊಸಬರೇ ಇರುವ ‘ಸ್ಟಾರ್’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ವಿಜಯ ಸೂರ್ಯ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ.

‘ಎರಡು ಗ್ಯಾಂಗ್‌ಗಳ ನಡುವಿನ ಹೊಡೆದಾಟದ ಕಥೆಯಿದೆ. ಇಲ್ಲಿನ ಪ್ರತಿ ಸನ್ನಿವೇಶಗಳನ್ನು ನೋಡುವಾಗ ನಮ್ಮ ಊರುಗಳಲ್ಲಿ ನಡೆದಂಥ ಘಟನೆಗಳು ನೆನಪಾಗುತ್ತವೆ. ಅಷ್ಟು ಸಹಜವಾದ ಸನ್ನಿವೇಶಗಳನ್ನು ಚಿತ್ರಕಥೆಯಲ್ಲಿ ಹೆಣೆಯಲಾಗಿದೆ. ನಾಯಕನಿಗೆ ಸ್ಟಾರ್ ಎಂದು ಹೆಸರು ಬರಲು ಕಾರಣವೇನು? ಎಂಬುದು ಸಿನಿಮಾ ನೋಡಿದಾಗ ತಿಳಿಯುತ್ತದೆ. ಬೆಂಗಳೂರಿನ ಕೆಲ ಕೊಳಗೇರಿ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ’ ಎಂದರು ನಿರ್ದೇಶಕ.

ಲಯನ್ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಶರತ್ ಪ್ರಕಾಶ್ ನಿರ್ಮಾಣ ಮಾಡುವುದರ ಜತೆಗೆ ನಾಯಕನಾಗಿ ನಟಿಸಿದ್ದಾರೆ. ‘ಭೂಮಿಗೆ ಹತ್ರ’ ಎಂಬ ಅಡಿಬರಹ ಚಿತ್ರಕ್ಕಿದೆ. ರಜತ ರಕ್ಷಾ ನಾಯಕಿ. ಹಲವು ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ. ಮೂರು ಹಾಡುಗಳಿಗೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದ್ದಾರೆ. ಎ.ಪಿ.ಎಸ್‌.ಕೆ ಛಾಯಾಚಿತ್ರಗ್ರಹಣ, ಶಶಿಧರ್‌ ಪಿ. ಸಂಕಲನವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.