ನಟ ಸುದೀಪ್
ಬೆಂಗಳೂರು: ‘ಬುಧವಾರ(ಸೆ.3) ವಿಷ್ಣುವರ್ಧನ್ ಅವರ ದರ್ಶನ ಕೇಂದ್ರ ಹೇಗಿರಲಿದೆ ಎನ್ನುವ ಒಂದು ವಿಡಿಯೊ ರಿಲೀಸ್ ಮಾಡುತ್ತಿದ್ದೇವೆ. ನಮ್ಮ ಯೋಜನೆಯನ್ನು ಅದರ ಮೂಲಕ ತಿಳಿಸಲಿದ್ದೇವೆ ಎಂದು ನಟ ಸುದೀಪ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಸುದೀಪ್, ‘ಈ ಭೂಮಿ ಒಂದು ಬಣ್ಣದ ಬುಗುರಿ ಎನ್ನುವ ಕಲ್ಪನೆಯಲ್ಲಿ ಇದು ಇರಲಿದೆ. ಭೂಮಿಗಾಗಿ ಒಂದು ಕಡೆ ಕಿತ್ತಾಟ ನಡೆಯುತ್ತಿದೆ. ಅದು ಅದರ ಪಾಡಿಗೆ ಆಗಲಿದೆ. ಇದಕ್ಕೆ ಅಂತ್ಯವಿಲ್ಲ. ಒಬ್ಬ ಅಭಿಮಾನಿಯಾಗಿ ಏನಾದರೂ ಮಾಡಬೇಕು ಎಂದೆನಿಸಿತು. ಹೀಗಾಗಿ ಈ ನಿರ್ಧಾರ ಮಾಡಿದೆ. ಇದರಲ್ಲಿ ಯಾವುದೇ ವಾಣಿಜ್ಯ ಉದ್ದೇಶವಿಲ್ಲ’ ಎಂದರು.
‘ರಾಜಕೀಯಕ್ಕೆ ಬರುವ ಯೋಚನೆ ಇಲ್ಲ. ಯೋಚನೆ ಬರುವ ಹಾಗೆ ಕೆಲವರು ಮಾಡುತ್ತಿರುತ್ತಾರೆ. ನಾನು ರಾಜಕೀಯಕ್ಕೆ ಹೋದರೆ ಬದಲಾಗದ ಹಾಗೆ ನಟ್ ಬೋಲ್ಟ್ ಟೈಟ್ ಮಾಡಿಕೊಳ್ಳುತ್ತೇನೆ’ ಎಂದರು ಸುದೀಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.