ADVERTISEMENT

ಯಶ್ ಅವರ ಟಾಕ್ಸಿಕ್ಸ್‌ನಲ್ಲಿ ಮತ್ತೋರ್ವ ಬಹುಭಾಷಾ ನಟ; ‘ಕರ್ಮಡಿ’ಯಾಗಿ ಸುದೇವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2026, 10:55 IST
Last Updated 23 ಫೆಬ್ರುವರಿ 2026, 10:55 IST
<div class="paragraphs"><p><strong>ಟಾಕ್ಸಿಕ್:</strong>&nbsp;ಗೀತು ಮೋಹನ್ ದಾಸ್ ನಿರ್ದೇಶನದ&nbsp;ಟಾಕ್ಸಿಕ್ ಮಾಫಿಯಾ ಕುರಿತ ಸಿನಿಮಾವಾಗಿದೆ. ಸಿನಿಮಾದಲ್ಲಿ ಯಶ್‌ ನಾಯಕ ನಟನಾಗಿ ನಟಿಸಿದ್ದಾರೆ.&nbsp;ಗೋವಾದ ಡ್ರಗ್ ಮಾಫಿಯಾದ ಕುರಿತ ಕಥಾ ಹಂದರವನ್ನು ಹೊಂದಿದೆ.&nbsp;2026ರ ಮಾರ್ಚ್ 19ರಂದು ಸಿನಿಮಾ ಬಿಡುಗಡೆಯಾಗಲಿದೆ.</p></div>

ಟಾಕ್ಸಿಕ್: ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಮಾಫಿಯಾ ಕುರಿತ ಸಿನಿಮಾವಾಗಿದೆ. ಸಿನಿಮಾದಲ್ಲಿ ಯಶ್‌ ನಾಯಕ ನಟನಾಗಿ ನಟಿಸಿದ್ದಾರೆ. ಗೋವಾದ ಡ್ರಗ್ ಮಾಫಿಯಾದ ಕುರಿತ ಕಥಾ ಹಂದರವನ್ನು ಹೊಂದಿದೆ. 2026ರ ಮಾರ್ಚ್ 19ರಂದು ಸಿನಿಮಾ ಬಿಡುಗಡೆಯಾಗಲಿದೆ.

   

ಬೆಂಗಳೂರು: ನಟ ಯಶ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಮಾರ್ಚ್ 19ರಂದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಇತ್ತೀಚೆಗೆ ಸಿನಿಮಾದ ಟೀಸರ್ ಸಹ ಬಿಡುಗಡೆ ಮಾಡಲಾಗಿದೆ. ಮಾತ್ರವಲ್ಲ, ಸಿನಿಮಾ ತಂಡ ಚಿತ್ರದ ಕುರಿತು ದಿನಕ್ಕೊಂದು ಮಾಹಿತಿ ನೀಡುತ್ತಾ, ಪ್ರೇಕಕ್ಷರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಸಿನಿಮಾದಲ್ಲಿ ಅನೇಕ ತಾರಾ ನಟ, ನಟಿಯರ ದಂಡೇ ಇದ್ದು, ಇಂದು (ಸೋಮವಾರ) ಸಿನಿಮಾ ತಂಡವು ಮತ್ತೋರ್ವ ತಾರಾ ನಟನ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

ADVERTISEMENT

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೆವಿಎನ್ ಪ್ರೊಡಕ್ಷನ್ಸ್, ನಟ ಸುದೇವ್ ನಾಯರ್ ಅವರ ಮೊದಲ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಅವರನ್ನು ‘ಕರ್ಮಡಿ’ ಎಂಬ ಪಾತ್ರದ ಮೂಲಕ‍ ಪರಿಚಯಿಸಲಾಗಿದೆ.

‘ಸುದೇವ್ ನಾಯರ್ ಅವರನ್ನು ಕರ್ಮಡಿಯಾಗಿ ಪರಿಚಯಿಸಲಾಗುತ್ತಿದೆ. ವಿಶ್ವದಾದ್ಯಂತ ಮಾರ್ಚ್ 19ರಂದು ಟಾಕ್ಸಿಕ್ ಬಿಡುಗಡೆಯಾಗುತ್ತಿದೆ. ಎಲ್ಲರೂ ವೀಕ್ಷಿಸಿ ಎಂದು ಕೆವಿಎನ್ ಪ್ರೊಡಕ್ಷನ್ಸ್ ಮಾಹಿತಿ ಹಂಚಿಕೊಂಡಿದೆ.

ಸಿನಿಮಾ ತಂಡವು ನಿರಂತರವಾಗಿ ಒಂದೊಂದೇ ಪಾತ್ರದ ಕುರಿತು ಮಾಹಿತಿ ನೀಡುತ್ತಾ ಬಂದಿದೆ. ವಿಶೇಷವಾಗಿ ಈ ಚಿತ್ರದಲ್ಲಿ ತಾರಾ ನಟಿಯರ ದಂಡೇ ಇರುವುದನ್ನು ಗಮನಿಸಿದಬಹುದು. ನಯನತಾರಾ ಅವರು ಗಂಗಾ ಪಾತ್ರದಲ್ಲಿ, ಕಿಯಾರಾ ಅಡ್ವಾಣಿ ಅವರು ನಾಡಿಯಾ ಪಾತ್ರದಲ್ಲಿ, ಹುಮಾ ಖುರೇಷಿ ಅವರು ಎಲಿಜಬೆತ್ ಪಾತ್ರದಲ್ಲಿ, ರುಕ್ಮಿಣಿ ವಸಂತ್ ಅವರು ಮೆಲ್ಲಿಸಾ ಪಾತ್ರದಲ್ಲಿ ಮತ್ತು ತಾರಾ ಸುತಾರಿಯಾ ಅವರು ರೆಬೆಕ್ಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಕಥೆಯನ್ನು ಯಶ್ ಮತ್ತು ಗೀತು ಮೋಹನದಾಸ್ ಅವರು ಬರೆದಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರೆ ಭಾಷೆಗಳಲ್ಲಿ ಡಬ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.