
ಬಾಲಿವುಡ್ ನಟ ಸನ್ನಿ ಡಿಯೋಲ್
ಚಿತ್ರ ಕೃಪೆ : ಪಿಟಿಐ
ಬಾಲಿವುಡ್ ನಟ ಸನ್ನಿ ಡಿಯೋಲ್ ಹಾಗೂ ಪ್ರೀತಿ ಜಿಂಟಾ ನಟನೆಯ ಐತಿಹಾಸಿಕ ಸಿನಿಮಾ ‘ಲಾಹೋರ್ 1947’ ಆಗಸ್ಟ್ 13ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
‘ಲಾಹೋರ್ 1947’ ಸಿನಿಮಾವನ್ನು ರಾಜ್‌ಕುಮಾರ್ ಸಂತೋಷಿ ನಿರ್ದೇಶನ ಮಾಡಿದ್ದಾರೆ. ಅಮಿರ್ ಖಾನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು, ಪ್ರಮುಖ ಪಾತ್ರದಲ್ಲಿ ಶಬಾನಾ ಅಜ್ಮಿ ನಟಿಸಿದ್ದಾರೆ.
ಸಿನಿಮಾ ಕುರಿತು ಮಾತನಾಡಿರುವ ಅಮಿರ್ ಖಾನ್ ‘ಧರ್ಮೇಂದ್ರ ಅವರು 2025ರಲ್ಲಿ ನಿಧನರಾದರು. ಈ ಸಿನಿಮಾದ ಚಿತ್ರಕಥೆ ಅವರ ನೆಚ್ಚಿನ ಚಿತ್ರಕಥೆಗಳಲ್ಲಿ ಒಂದಾಗಿತ್ತು. ಅವರು ಒಪ್ಪಿದ ಈ ಸಿನಿಮಾವನ್ನು ನೋಡಲು ಸಾಧ್ಯವಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ.’ ಎಂದು ಹೇಳಿದ್ದಾರೆ.
ಡಿಯೋಲ್ ಮತ್ತು ಜಿಂಟಾ ಇಬ್ಬರೂ ಈ ಹಿಂದೆ ‘ಫರ್ಜ್’ ಹಾಗೂ ‘ದಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಮ್ಮೆ ‘ಲಾಹೋರ್ 1947’ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.