ಬೆಂಗಳೂರು: ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಅಲ್ಲದೆ, ಕುಟುಂಬದಲ್ಲಿ ನಡೆಯುವ ಕೆಲವೊಂದು ತಮಾಷೆಯ ಸಂಗತಿಗಳನ್ನು ಕೂಡ ಹಂಚಿಕೊಳ್ಳುತ್ತಾರೆ.
ಸನ್ನಿ ಲಿಯೋನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಅವರ ಪತಿ ಡೇನಿಯಲ್ ವೆಬರ್ ನೃತ್ಯ ಮಾಡಲು ಯತ್ನಿಸುತ್ತಿರುವ ದೃಶ್ಯವಿದೆ.
ಹಾಡೊಂದಕ್ಕೆ ಸನ್ನಿ ಲಿಯೋನ್ ನೃತ್ಯ ಮಾಡುತ್ತಿದ್ದರೆ, ಅವರ ಜತೆ ಹೆಜ್ಜೆ ಹಾಕಲು ಡೇನಿಯಲ್ ಯತ್ನಿಸುತ್ತಿದ್ದಾರೆ. ಸನ್ನಿ ಡ್ಯಾನ್ಸ್ ವೇಗವನ್ನು ಸರಿದೂಗಿಸಲು ಡೇನಿಯಲ್ ಸಾಧ್ಯವಾಗುವುದಿಲ್ಲ. ಇದೊಂದು ತಮಾಷೆಯೆಂಬಂತೆ ಸನ್ನಿ ಲಿಯೋನ್ ಪೋಸ್ಟ್ ಮಾಡಿದ್ದು, ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
ಉತ್ತಮ ಸಂಗೀತಕ್ಕೆ ಯಾರು ಬೇಕಾದರೂ ಡ್ಯಾನ್ಸ್ ಮಾಡಬಹುದು, ಆದರೆ ಬರೇ ಸಂಗೀತದಿಂದ ಓರ್ವ ಉತ್ತಮ ಡ್ಯಾನ್ಸರ್ ಆಗಲು ಸಾಧ್ಯವಿಲ್ಲ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.