‘ಸೂರಿ ಅಣ್ಣ’ ಸಿನಿಮಾ ಪೋಸ್ಟರ್
ಕೃಪೆ: ಯುಟ್ಯೂಬ್ / MRT Music
‘ಸಲಗ’ ಚಿತ್ರದಿಂದ ‘ಸೂರಿ ಅಣ್ಣ’ ಎಂದೆ ಖ್ಯಾತರಾಗಿರುವ ದಿನೇಶ್, ಆ ಪಾತ್ರವನ್ನೇ ಶೀರ್ಷಿಕೆಯಾಗಿಸಿಕೊಂಡು ಚಿತ್ರ ಮಾಡಿದ್ದಾರೆ. ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
‘ಈ ಹಿಂದೆ ರೌಡಿಸಂ ಕಥೆ ಆಧರಿಸಿದ ‘ಓಂ’ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ‘ಸೂರಿ ಅಣ್ಣ’ ಕೂಡ ರೌಡಿಸಂ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಯಾರೂ ರೌಡಿಸಂ ಮಾಡಬೇಡಿ. ಎಲ್ಲರಿಗೂ ಕುಟುಂಬ ಇರುತ್ತದೆ. ಎಲ್ಲದಕ್ಕಿಂತ ಕುಟುಂಬ ಮುಖ್ಯ ಎಂಬ ಸಂದೇಶವನ್ನು ಈ ಚಿತ್ರ ನೀಡುತ್ತದೆ. ನನ್ನ ಹೆಸರು ದಿನೇಶ್. ‘ಸಲಗ’ ಚಿತ್ರದ ನಂತರ ‘ಸೂರಿ ಅಣ್ಣ’ ಎಂದೇ ಎಲ್ಲರೂ ಗುರುತಿಸುತ್ತಾರೆ. ಹಾಗಾಗಿ ಅದನ್ನೇ ಶೀರ್ಷಿಕೆಯಾಗಿಸಿರುವೆ’ ಎಂದರು ನಿರ್ದೇಶಕರು.
ಸಂಭ್ರಮಶ್ರೀ ನಾಯಕಿ. ರವಿ ಕಾಳೆ, ಹರೀಶ್ ರಾಯ್, ಕಾಕ್ರೋಜ್ ಸುಧೀ, ಪ್ರಕಾಶ್ ತೂಮಿನಾಡು, ಎಸ್ ಕೆ.ಉಮೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಕೆ.ಎಂ.ಇಂದ್ರ ಸಂಗೀತ ನೀಡಿದ್ದಾರೆ. ಎಂ.ಬಿ.ಅಳಿಕಟ್ಟಿ ಛಾಯಾಚಿತ್ರಗ್ರಹಣ, ಎನ್.ಎಂ.ವಿಶ್ವ ಸಂಕಲನವಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಇನ್ನೆರಡು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.