ADVERTISEMENT

ನಟ ಸುಶಾಂತ್ ಸಿಂಗ್‌ ಫೇಸ್‌ಬುಕ್‌ ಖಾತೆಯಿಂದ ಹೊಸ ವರ್ಷದ ಶುಭಾಶಯ ಕೋರಿದ್ದು ಯಾರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2022, 7:40 IST
Last Updated 2 ಜನವರಿ 2022, 7:40 IST
ಸುಶಾಂತ್ ಸಿಂಗ್ ರಜಪೂತ್
ಸುಶಾಂತ್ ಸಿಂಗ್ ರಜಪೂತ್   

ನವದೆಹಲಿ: ದಿವಂಗತ ನಟಸುಶಾಂತ್ ಸಿಂಗ್ ರಜಪೂತ್ ಅವರ ಫೇಸ್‌ಬುಕ್‌ ಖಾತೆಯಿಂದ ಹೊಸ ವರ್ಷದ ಶುಭಾಶಯ ಕೋರಲಾಗಿದೆ.ಸುಶಾಂತ್‌ ಅವರ ಸಹೋದರಿಶ್ವೇತಾ ಸಿಂಗ್ ಕೀರ್ತಿ ಅವರು ಇದನ್ನು ಪೋಸ್ಟ್‌ ಮಾಡಿದ್ದಾರೆ.

‘ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.ಇದು ಶ್ವೇತಾ ಸಿಂಗ್ ಕೀರ್ತಿ. ನಿಮ್ಮೆಲ್ಲರಿಗೂ ಭಾಯಿ(ಸಹೋದರ)ಪರವಾಗಿ ಹಾರೈಸುತ್ತೇನೆ’ಎಂದು ಶ್ವೇತಾ ಸಿಂಗ್ ಕೀರ್ತಿ ಪೋಸ್ಟ್‌ ಮಾಡಿದ್ದಾರೆ.

2019 ಜೂನ್ 14ರಂದು ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ದೇಶದ ಗಮನ ಸೆಳೆದಿತ್ತು. ನಂತರ ಈ ಸಾವಿನ ಪ್ರಕರಣ ಹಲವು ತಿರುವು ಪಡೆದುಕೊಂಡಿತ್ತು.

ADVERTISEMENT

ಶ್ವೇತಾ ಸಿಂಗ್ ಕೀರ್ತಿ ಅವರುಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ‘ಸುಶಾಂತ್‌ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿ, ನಮಗೆ ನ್ಯಾಯಕೊಡಿಸಿ'ಎಂದು ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.