ADVERTISEMENT

ಟ್ರೋಲರ್‌ಗಳಿಗೆ ಚಾಟಿ: ಸುಶ್ಮಿತಾ ಸೇನ್‌ ಪರ ನಿಂತ ಮಾಜಿ ಪ್ರಿಯಕರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 12:46 IST
Last Updated 16 ಜುಲೈ 2022, 12:46 IST
ರೋಹ್ಮನ್ ಶಾವ್ಲ್ ಹ ಸುಶ್ಮಿತಾ ಸೇನ್‌
ರೋಹ್ಮನ್ ಶಾವ್ಲ್ ಹ ಸುಶ್ಮಿತಾ ಸೇನ್‌   

ಮುಂಬೈ: ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ ಅವರು ಉದ್ಯಮಿ ಲಲಿತ್‌ ಮೋದಿ ಜೊತೆ ಡೇಟಿಂಗ್‌ನಲ್ಲಿರುವ ವಿಚಾರ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

ಸುಶ್ಮಿತಾರ ಹೊಸ ಸಂಬಂಧಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಟ್ರೋಲ್‌ ಮಾಡಿದ್ದಾರೆ.

ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಸಂಬಂಧದ ಕುರಿತು ವ್ಯಂಗ್ಯವಾಡಿದವರ ವಿರುದ್ಧ ಸುಶ್ಮಿತಾರ ಮಾಜಿ ಪ್ರಿಯಕರ ರೋಹ್ಮನ್ ಶಾವ್ಲ್ ಹರಿಹಾಯ್ದಿದ್ದಾರೆ. ಈ ಮೂಲಕ ಸುಶ್ಮಿತಾ ಪರವಾಗಿ ಶಾಲ್‌ ನಿಂತಿದ್ದಾರೆ.

ADVERTISEMENT

ಈ ವಿಚಾರದ ಕುರಿತು ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ನಲ್ಲಿ ಪೋಸ್ಟ್‌ ಮಾಡಿರುವ ಶಾವ್ಲ್, ‘ಯಾರನ್ನಾದರೂ ಅಪಹಾಸ್ಯ ಮಾಡಿದಾಗ ನಿಮಗೆ ನೆಮ್ಮದಿ ಸಿಗುತ್ತದೆಂದರೆ ನೀವು ಅಪಹಾಸ್ಯ ಮಾಡಿಬಿಡಿ. ಏಕೆಂದರೆ, ತೊಂದರೆ ಇರುವುದು ನಿಮಗೆ ಹೊರತು, ಅವರಿಗಲ್ಲ(ಸುಶ್ಮಿತಾ)’ ಎಂದು ಹೇಳಿದ್ದಾರೆ.

2021ರ ಡಿಸೆಂಬರ್‌ ತಿಂಗಳ ಆರಂಭದಲ್ಲಿ ರೋಹ್ಮನ್ ಶಾವ್ಲ್ ಜೊತೆ ಬ್ರೇಕಪ್ ಆಗಿರುವುದಾಗಿ ಘೋಷಿಸಿದ್ದ ಬಾಲಿವುಡ್ ನಟಿ ಸುಶ್ಮಿತಾ ಸೇನ್, ಸ್ನೇಹಿತರಾಗಿ ಮುಂದುವರಿಯುವುದಾಗಿ ಹೇಳಿದ್ದರು. ಮಾಜಿ ಭುವನ ಸುಂದರಿಯೂ ಆಗಿರುವ ಸುಶ್ಮಿತಾ ಈ ಹಿಂದೆ ಹಲವರ ಜೊತೆ ಡೇಟಿಂಗ್‌ನಲ್ಲಿದ್ದರು.

ಭಾರತದಲ್ಲಿ ಇಂಡಿಯನ್ ಪ್ರಿಮೀಯರ್ ಲಿಗ್‌ ಅನ್ನು (ಐಪಿಎಲ್‌) ಹುಟ್ಟುಹಾಕಿದ್ದ ಉದ್ಯಮಿ ಹಾಗೂ ಈಗ ತೆರಿಗೆ ವಂಚನೆ ಪ್ರಕರಣದಲ್ಲಿ ಭಾರತ ತೊರೆದು ವಿದೇಶದಲ್ಲಿರುವ ಲಲಿತ್ ಮೋದಿ, ನಟಿ ಹಾಗೂ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್‌ನಲ್ಲಿ ಇರುವುದನ್ನು ಸ್ವತಃ ಮೋದಿ ಅವರೇ ಬಹಿರಂಗಪಡಿಸಿದ್ದಾರೆ.

1996ರಲ್ಲಿ ಬಿಡುಗಡೆಯಾದ ‘ದಸ್ತಕ್‌’ ಚಿತ್ರದಿಂದ ಸುಶ್ಮಿತಾ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದರು. 2010ರಲ್ಲಿ ‘ನೋ ಪ್ರಾಬ್ಲಮ್‌’ ಚಿತ್ರದ ನಂತರ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಅದಾದ ಬಳಿಕ ‘ಆರ್ಯ’ ವೆಬ್‌ ಸಿರೀಸ್‌ ಮೂಲಕ ಮತ್ತೆ ನಟನೆಗೆ ಮರಳಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.