ADVERTISEMENT

Sandalwood | ಜು.25ಕ್ಕೆ ‘ಸ್ವಪ್ನಮಂಟಪ’

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 23:30 IST
Last Updated 6 ಜುಲೈ 2025, 23:30 IST
ವಿಜಯ್‌ ರಾಘವೇಂದ್ರ, ರಂಜನಿ ರಾಘವನ್‌
ವಿಜಯ್‌ ರಾಘವೇಂದ್ರ, ರಂಜನಿ ರಾಘವನ್‌   

ವಿಜಯರಾಘವೇಂದ್ರ ಮತ್ತು ರಂಜನಿ ರಾಘವನ್‌ ಮುಖ್ಯಭೂಮಿಕೆಯಲ್ಲಿರುವ ‘ಸ್ವಪ್ನಮಂಟಪ’ ಜುಲೈ 25ಕ್ಕೆ ತೆರೆಗೆ ಬರಲಿದೆ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಈ ಚಿತ್ರ ಈಗಾಗಲೇ ಕೆಲ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಗೊಂಡು, ಪ್ರದರ್ಶನ ಕಂಡಿದೆ. 

‘ಸ್ವಪ್ನಮಂಟಪ’ವು ಬರಗೂರರ ಕಾದಂಬರಿಯನ್ನು ಆಧರಿಸಿದೆ. ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಕಥೆ ಹೊಂದಿದೆ. ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ ‘ಸ್ವಪ್ನಮಂಟಪ’ವನ್ನು ಕೆಲವರು ಕೆಡವಿ ಅನ್ಯ ಕಾರ್ಯಗಳಿಗೆ ಬಳಸಲು ಯತ್ನಿಸಿದಾಗ ಕಥಾ ನಾಯಕ ಮತ್ತು ನಾಯಕಿ, ಜನರಲ್ಲಿ ಜಾಗೃತಿ ಮೂಡಿಸಿ ಆ ಪಾರಂಪರಿಕ ಸ್ಥಳವನ್ನು ಉಳಿಸುವ ಕೆಲಸ ಮಾಡುತ್ತಾರೆ. ಅನೇಕ ತಿರುವುಗಳನ್ನು ಒಳಗೊಂಡಿರುವ ಕಥಾವಸ್ತು ಈ ಚಿತ್ರದಲ್ಲಿದೆ’ ಎಂದಿದೆ ಚಿತ್ರತಂಡ.

ಮೈಸೂರಿನ ಬಾಬುನಾಯಕ್‌ ಮಲೈ ಮಹಾದೇಶ್ವರ ಎಂಟರ್‌ಪ್ರೈಸಸ್ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಾಯಕ–ನಾಯಕಿ ಇಬ್ಬರೂ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಂದರರಾಜ್, ಶೋಭಾ ರಾಘವೇಂದ್ರ, ರಜನಿ, ಸುಂದರರಾಜ ಅರಸು ಮುಂತಾದವರು ತಾರಾಗಣದಲ್ಲಿದ್ದಾರೆ.
ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ,ನಾಗರಾಜ ಆದವಾನಿ ಛಾಯಾಚಿತ್ರಗ್ರಹಣ, ಸುರೇಶ್ ಅರಸು ಸಂಕಲನ ಈ ಚಿತ್ರಕ್ಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.