ADVERTISEMENT

ಐಟಿ ದಾಳಿ ಬಗ್ಗೆ ಮೌನ ಮುರಿದ ಬಾಲಿವುಡ್‌ ನಟಿ ತಾಪ್ಸಿ ಪನ್ನು

ಪಿಟಿಐ
Published 6 ಮಾರ್ಚ್ 2021, 15:56 IST
Last Updated 6 ಮಾರ್ಚ್ 2021, 15:56 IST
 ತಾಪ್ಸಿ ಪನ್ನು (ಪಿಟಿಐ ಚಿತ್ರ )
ತಾಪ್ಸಿ ಪನ್ನು (ಪಿಟಿಐ ಚಿತ್ರ )   

ಮುಂಬೈ: ಇತ್ತೀಚೆಗೆ ತಮ್ಮ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ಬಗ್ಗೆ ಬಾಲಿವುಡ್‌ ನಟಿ ತಾಪ್ಸಿ ಪನ್ನು ಶನಿವಾರ ಮೌನಮುರಿದಿದ್ದಾರೆ. ಈ ಕುರಿತು ಅವರು ಮೂರು ಟ್ವೀಟ್‌ಗಳ ಮೂಲಕ ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ.

‘ಮೂರು ಮುಖ್ಯ ವಿಷಯಗಳಿಗಾಗಿ ಮೂರು ದಿನ ತೀವ್ರ ತಪಾಸಣೆ ನಡೆಯಿತು. ಮೊದಲನೇಯದು,ಪ್ಯಾರಿಸ್‌ನಲ್ಲಿ ನಾನು ಹೊಂದಿದ್ದೇನೆ ಎಂದು ಹೇಳಲಾಗುತ್ತಿರುವಬಂಗಲೆಯ ಕೀಲಿಗಳು. ಏಕೆಂದರೆ ಬೇಸಿಗೆ ಹತ್ತಿರಲ್ಲೇ ಇದೆ’ ಎಂದು ಮೊದಲ ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಎರಡನೇಯದು, ನನ್ನನ್ನು ಸಿಲುಕಿಸಿ, ನನ್ನ ವಿರುದ್ಧ ನಿರಂತರ ದಾಳಿ ಮಾಡುವ ಸಲುವಾಗಿ ₹5 ಕೋಟಿಗೆ ಸಂಬಂಧಿಸಿದ ರಶೀದಿ. ಯಾಕೆಂದರೆ, ಈ ಹಣ ನನ್ನದಲ್ಲ ಎಂದು ನಾನು ಈ ಮೊದಲೇ ನಿರಾಕರಿಸಿದ್ದೇನೆ' ಎಂದು ಎರಡನೇ ಟ್ವೀಟ್‌ನಲ್ಲಿ ಹೇಳಿದ್ದಾರೆ.

ADVERTISEMENT

‘ಗೌರವಾನ್ವಿತ ಹಣಕಾಸು ಸಚಿವರ ಪ್ರಕಾರ 2013ರಲ್ಲಿ ನನ್ನ ಮೇಲೆ ನಡೆದಿತ್ತು ಎನ್ನಲಾದ ದಾಳಿಯ ನನ್ನ ನೆನಪುಗಳು,'
'ಇನ್ನು ಮುಂದೆ ಬಹಳ ಅಗ್ಗವಾಗುವುದಿಲ್ಲ' (ನಾಟ್‌ ಸಸ್ತಿ ಎನಿ ಮೋರ್‌)’ ಎಂದು ತಾಪ್ಸಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.