ನಟ ಧನುಷ್ ಹಾಗೂ ಕೃತಿ ಸೆನನ್ ನಟನೆಯ ‘ತೇರೆ ಇಷ್ಕ್ ಮೇ’ ಸಿನಿಮಾ ಮೊದಲ ವಾರದಲ್ಲಿ ವಿಶ್ವದಾದ್ಯಂತ ₹118 ಕೋಟಿ ಗಳಿಸಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.
ಆನಂದ್ ಎಲ್ ರೈ ನಿರ್ದೇಶನದ ಈ ರೊಮ್ಯಾನ್ಸ್ ಡ್ರಾಮಾ ಸಿನಿಮಾ ಕಳೆದ ನ.28ಕ್ಕೆ ರಿಲೀಸ್ ಆಗಿತ್ತು. 2013ರಲ್ಲಿ ತೆರೆಕಂಡ ಧನುಷ್ ನಟನೆಯ ‘ರಾಂಝನ’ ಸಿನಿಮಾವನ್ನೂ ಆನಂದ್ ನಿರ್ದೇಶಿಸಿದ್ದರು. ಇದೀಗ ತೆರೆಕಂಡಿರುವ ಸಿನಿಮಾ ‘ರಾಂಝನ’ ಸಿನಿಮಾದ ಸೀಕ್ವೆಲ್ ಆಗಿದೆ. ಇದಾದ ಬಳಿಕ ‘ಅತರಂಗೀ ರೆ’ ಸಿನಿಮಾದಲ್ಲೂ ಧನುಷ್‌ಗೆ ಆನಂದ್ ಆ್ಯಕ್ಷನ್ ಕಟ್ ಹೇಳಿದ್ದರು. ‘ತೇರೆ ಇಷ್ಕ್ ಮೇ’ ಸಿನಿಮಾವನ್ನು ಟಿ–ಸೀರೀಸ್ ಮತ್ತು ಕಲರ್ ಯೆಲ್ಲೋ ಪ್ರೊಡಕ್ಷನ್ಸ್ ಪ್ರಸ್ತುಪಡಿಸಿದೆ. ಎ.ಆರ್.ರಹಮಾನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಪ್ರಕಾಶ್ ರಾಜ್, ಟೊಟಾ ರಾಯ್ ಚೌಧರಿ, ಪರಮ್‌ವೀರ್ ಸಿಂಗ್ ಚೀಮಾ ಚಿತ್ರದ ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.