ಅಭಿನಯ್ ಕಿಂಗರ್
ಚೆನ್ನೈ: ದೀರ್ಘಕಾಲದ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳು ನಟ ಅಭಿನಯ್ ಕಿಂಗರ್ (44) ಸೋಮವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ.
ನಟನಿಗೆ ಕುಟುಂಬ ಸದಸ್ಯರು ಇಲ್ಲದ ಕಾರಣ, ಅಂತಿಮ ವಿಧಿಗಳನ್ನು ನಡೆಸಲು ದಕ್ಷಿಣ ಭಾರತದ ಕಲಾವಿದರ ಸಂಘ ತನ್ನ ಸದಸ್ಯರನ್ನು ಕೇಳಿದೆ ಎಂದು ವರದಿಯಾಗಿದೆ.
ಕಸ್ತೂರಿ ರಾಜಾ ಅವರ ನಿರ್ಮಾಣದಲ್ಲಿ 2002ರಲ್ಲಿ ತೆರೆಕಂಡ ‘ತುಳ್ಳುವದೋ ಇಳಮೈ’ ಚಿತ್ರದ ಮೂಲಕ ಅಭಿನಯ್, ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
ಅಲ್ಲಿಂದ ಆರಂಭವಾದ ಅವರ ಸಿನಿಪಯಣ 2004ರಲ್ಲಿ ‘ಸಿಂಗಾರಾ ಚೆನ್ನೈ’, 2005ರಲ್ಲಿ ‘ಪೊನ್ ಮೇಘಲೈ’, 2009ರಲ್ಲಿ ‘ಸೊಲ್ಲಾ ಸೊಲ್ಲಾ ಇನಿಕ್ಕಮ್’ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯ್ ಕಾಣಿಸಿಕೊಂಡಿದ್ದರು. 2014ರಲ್ಲಿ ಕೊನೆಯ ಬಾರಿ ತೆರೆ ಮೇಲೆ ಅಭಿನಯ್ ಮಿಂಚಿದ್ದರು.
ಲಿವರ್ ಸಮಸ್ಯೆ ಕಾಣಿಸಿಕೊಂಡ ಬಳಿಕ, ಚಿತ್ರರಂಗದಿಂದ ದೂರವುಳಿದಿದ್ದ ಅಭಿನಯ್, ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.